ಮೈಸೂರು

ಜೂಜಾಡುತ್ತಿದ್ದ ನಾಲ್ವರ ಬಂಧನ

ವಿವಿ ಪುರಂ: ಗೋಕುಲಂ ಚಿತ್ರಮಂದಿರದ ಹಿಂದೆ ಇತ್ತೀಚಿಗೆ ಜಾಜಾಡುತ್ತಿದ್ದ ನಾಲ್ವರನ್ನು ಮೈಸೂರಿನ ವಿವಿ ಪುರಂ ಪೊಲೀಸರು ಬಂಧಿಸಿ, 4,470 ರು. ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗೋಕುಲಂನ ಅಭಿಷೇಕ್(21), ರಾಜೀವ್‍ನಗರದ ಇನಾಯತ್ವುಲ್ಲಾ(24), ಮೇಟಗಳ್ಳಿಯ ಮೋಹನ್ ಆರ್‍.(23), ಮೇಟಗಳ್ಳಿಯ ಪ್ರಸನ್ನ ಕುಮಾರ್(27) ಬಂಧಿತ ಆರೋಪಿಗಳು. ವಿವಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಿ ಪುರಂ ಇನ್ಸ್‍ಪೆಕ್ಟರ್ ಸಿ.ವಿ. ರವಿ ಮತ್ತು ಪ್ರಸನ್ನ, ಶಿವು, ದಿವಾಕರ್ ಮತ್ತು ವಿಶ್ವನಾಥ್ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ್ದರು.

ಮರಳು ಅಕ್ರಮ ಗಣಿಗಾರಿಕೆ: ಮೂವರ ಬಂಧನ

ಮೇಟಗಳ್ಳಿ: ಮೈಸೂರು ನಗರದ ಸಿಸಿಬಿ ಪೊಲೀಸರು ಮೇಟಗಳ್ಳಿ ಬಳಿಯ ನಾಗನಹಳ್ಳಿ ಮುಖ್ಯ ರಸ್ತೆ ಸನಿಹ ನಡೆಯುತ್ತಿದ್ದ ಮರಳು ಅಕ್ರಮ ಗಣಿಗಾರಿಕೆ ಅಡ್ಡೆಗೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಕುಂಬಾರಕೊಪ್ಪಲಿನ ಬಸವ ಕುಮಾರ್(24), ನಾಗನಹಳ್ಳಿಯ ಕಾಂತರಾಜು(24) ಮತ್ತು ಹರೀಶ್(32) ಬಂಧಿತರು.

ಮರಳು ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಮೇಟಗಳ್ಳಿ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ನಡೆಸಿದ ತಂಡದಲ್ಲಿ ಎಸಿಪಿ ಸಿ.ಗೋಪಾಲ್, ಪಿಎಸ್‍ಐ ಜಯಶೀಲನ್ ಮತ್ತು ಸಿಬ್ಬಂದಿ ಇದ್ದರು.

Leave a Reply

comments

Related Articles

error: