ಮೈಸೂರು

‘ಮೈಸೂರು ನ್ಯೂಸ್ ಚಾನೆಲ್’ ಲೋಕಾರ್ಪಣೆ

ಮೈಸೂರು,ಆ.30:- ಇಂದು ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ರಾಧಾ ಮಾಧವ ಟವರ್ಸ್‍ನ ಕಟ್ಟಡದಲ್ಲಿ ‘ಮೈಸೂರು ನ್ಯೂಸ್ ಚಾನೆಲ್’ನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಕೆ.ಆರ್.ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ವಿಜಯನಗರ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಡಾ.ಭಾಷ್ಯಂ ಸ್ವಾಮೀಜಿ, ಸಮಾಜ ಸೇವಕ ಡಿ.ಟಿ.ಪ್ರಕಾಶ್, ಮೈಸೂರು ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ಆಗಮಿಕ ಶೇಷಾದ್ರಿ, ಇನ್ಫೋಸಿಸ್‍ನ ಉದ್ಯೋಗಿ ಹಾಗೂ ಚಾನೆಲ್ ವ್ಯವಸ್ಥಾಪಕ ಅಮರ್, ನಿರ್ದೇಶಕ ಸತ್ಯನಾರಾಯಣ ಸಿಂಗ್, ಸಂಪಾದಕ ಮಂಜುನಾಥ್, ಸತ್ಯನಾರಾಯಣ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: