ಪ್ರಮುಖ ಸುದ್ದಿ

ನಿವಾಸ ತಲುಪಿದ ಪ್ರಣಬ್ ಮುಖರ್ಜಿ ಪಾರ್ಥೀವ ಶರೀರ : ರಕ್ಷಣಾ ಸಚಿವರಿಂದ ಶ್ರದ್ಧಾಂಜಲಿ ಸಲ್ಲಿಕೆ


ದೇಶ(ನವದೆಹಲಿ)ಸೆ.1:- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆಯನ್ನು ಇಂದು ಲೋಧಿ ರಸ್ತೆಯ ಶವಾಗಾರದಲ್ಲಿ ನಡೆಸಲಾಗುತ್ತಿದೆ.
ಪ್ರಣಬ್ ಮುಖರ್ಜಿ ನಿನ್ನೆ ಸಂಜೆ ನಿಧನರಾದರು, ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರನ್ನು ಆಗಸ್ಟ್ 10 ರಂದು ಸೇನೆಯ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಅದೇ ದಿನ ಮಾಡಲಾಗಿತ್ತು. ನಂತರ ಪ್ರಣಬ್ ಮುಖರ್ಜಿ ಅವರಿಗೆ ಶ್ವಾಸಕೋಶದಲ್ಲೂ ಸೋಂಕು ತಗುಲಿತ್ತು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಇಡೀ ದೇಶವು ತನ್ನ ನೆಚ್ಚಿನ ರಾಜಕಾರಣಿ ಪ್ರಣಬ್ ಮುಖರ್ಜಿ ಅವರಿಗೆ ಇಂದು ಅಂತಿಮ ವಿದಾಯ ಹೇಳುತ್ತಿದೆ. ದೇಶದಲ್ಲಿ ಶೋಕದ ಅಲೆ ಇದೆ. ಪ್ರಣಬ್ ಮುಖರ್ಜಿ ಅವರ ನಿಧನದಿಂದಾಗಿ ದೇಶಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಪ್ರಣಬ್ ಮುಖರ್ಜಿ ಅವರಿಗೆ ಗೌರವ ಸಲ್ಲಿಸಿದರು. ಕೊರೋನಾ ಸೋಂಕಿನಿಂದಾಗಿ ಪ್ರಣಬ್ ಮುಖರ್ಜಿ ಅವರ ದೇಹವನ್ನು ಗಾಜಿನ ಶವಪೆಟ್ಟಿಗೆಯಲ್ಲಿ ಇಡದ ಕಾರಣ, ಸಂದರ್ಶಕರು ಅವರ ನಿವಾಸದಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸುತ್ತಿದ್ದಾರೆ. (ಏಜೆನ್ಸೀಸ್,ಎರಸ್.ಎಚ್)

Leave a Reply

comments

Related Articles

error: