ಪ್ರಮುಖ ಸುದ್ದಿ

ದೇಶದಲ್ಲಿ ನಿಲ್ಲದ ಕೊರೋನಾ : 24 ಗಂಟೆಗಳಲ್ಲಿ 69 ಸಾವಿರ ಹೊಸ ಪ್ರಕರಣ ಪತ್ತೆ; , 819 ಸಾವು

ದೇಶ(ನವದೆಹಲಿ)ಸೆ.1:- ದೇಶದಲ್ಲಿ ಕೊರೋನಾ ವೈರಸ್ ಸೋಂಕು ನಿರಂತರವಾಗಿ ಹೆಚ್ಚುತ್ತಲೇ ಇದೆ. ಯುಎಸ್, ಬ್ರೆಜಿಲ್ ನಲ್ಲಿ, ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಅಂಕಿ ಅಂಶಗಳು ಕಡಿಮೆಯಾಗಿವೆ. ಆದರೆ ಮಾರಕ ಕೊರೋನಾ ವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 69,921 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದೇ ವೇಳೆ 819 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದ ಒಟ್ಟು ರೋಗಿಗಳ ಸಂಖ್ಯೆ 36,91,167 ಕ್ಕೆ ಏರಿದೆ. 7,85,996 ಸಕ್ರಿಯ ಪ್ರಕರಣಗಳಿದ್ದು, 28,39,883ಮಂದಿ ಗುಣಮುಖರಾಗಿದ್ದಾರೆ, ಒಟ್ಟು 65,288 ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯವಂತ ಜನರ ಸಂಖ್ಯೆ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: