ಮನರಂಜನೆ

ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ : ರಿಂಕು ರಾಜಗುರು

2016ರ ಮರಾಠಿ ಬ್ಲಾಕ್‍ ಬಸ್ಟರ್‍ ಚಲನಚಿತ್ರ ‘ಸೈರಾಟ್‍’ ನ ನಾಯಕಿ ನಟಿ ರಿಂಕು ರಾಜಗುರು ತನ್ನ ವಯಸ್ಸಿಗೂ ಮೀರಿದ ಪ್ರಬುದ್ಧತೆಯನ್ನು ನಟನೆಯಲ್ಲಿ ಮೆರೆದಿದ್ದು ಕನ್ನಡದಲ್ಲಿ ಡಬ್ಬಿಂಗ್ ಆದ ‘ಮನಸು ಮಲ್ಲಿಗೆ’ಗೂ ಅವರೇ ನಾಯಕಿಯಾಗುವಂತೆ ಅವರ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿರುವುದೇ ಸಾಕ್ಷಿ.

ಎಸ್.ನಾರಾಯಣ್ ಅವರ ರಿಮೇಕ್ ಚಿತ್ರ ‘ಮನಸು ಮಲ್ಲಿಗೆ’ ತನ್ನ ಅಂತರಾಳವನ್ನು ಬಿಚ್ಚಿಟ್ಟಿದ್ದು ಕನ್ನಡ ಚಿತ್ರದಲ್ಲಿ ಅಭಿನಯಿಸುವಾಗ ಅನ್ಯ ಭಾಷೆಯೆನ್ನುವ ಭಾವನೆಯೇ ಬರಲಿಲ್ಲ. ಅಲ್ಲದೇ ಈಗಾಗಲೇ ಸೈರಾಟ್‍ನಲ್ಲಿಯೇ ಅಭಿನಯಿಸಿದ ಪಾತ್ರವನ್ನೇ ಇಲ್ಲಿಯೂ ಮಾಡಿದ್ದು ಹೆಚ್ಚಿನ ಬದಲಾವಣೆಗಳೇನು ಇರಲಿಲ್ಲ, ಹಾಗಾಗಿ ರಿಮೇಕ್ ಚಿತ್ರವಾಗಿದ್ದರೂ ಕೂಡ ಸಹಜವಾಗಿ ಮಾತೃಭಾಷೆಯಲ್ಲಿ ಅಭಿನಯಿಸಿದಷ್ಟು ಸಂತೃಪ್ತಿ ನೀಡಿದೆ ಎನ್ನುತ್ತಾರೆ.

ಕೇವಲ 15 ವರ್ಷ ವಯೋಮಾನದ ರಿಂಕು ರಾಜಗುರು ಇತ್ತೀಚೆಗಷ್ಟೆ ಹತ್ತನೇ ತರಗತಿಯ ಪರೀಕ್ಷೆಯನ್ನು ಮುಗಿಸಿಕೊಂಡು ‘ಮನಸು ಮಲ್ಲಿಗೆ’ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾರಂಗಕ್ಕೆ ಬಂದಿದ್ದು ಆಕಸ್ಮಿಕ, ನಾನಿನ್ನು ಚಿಕ್ಕವಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ್ದು, ಚಿತ್ರೀಕರಣದ ಸಮಯದಲ್ಲಿ ತಾವು ಕಲಿತ ಕನ್ನಡ ಪದಗಳನ್ನು ಸ್ವಷ್ಟವಾಗಿ ಮಾತನಾಡುವರು. (ಕೆ.ಎಂ.ಆರ್)

Leave a Reply

comments

Related Articles

error: