ಪ್ರಮುಖ ಸುದ್ದಿಮೈಸೂರು

ಹಿಂದುಳಿದ ವರ್ಗದವರು ರಾಜಕೀಯವಾಗಿ ಜಾಗೃತರಾಗಿದ್ದಾರೆ :ಯಡಿಯೂರಪ್ಪ

ಹಿ೦ದುಳಿದ ವರ್ಗಗಳ ಹರಿಕಾರ, ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ನ೦ಜನಗೂಡು ಉಪಚುನಾವಣಾ ಪ್ರಚಾರದ ಅ೦ಗವಾಗಿ, ಭಾನುವಾರ ನ೦ಜನಗೂಡಿನಲ್ಲಿ ಹಿ೦ದುಳಿದ ವರ್ಗಗಳ ಪ್ರಮುಖರು ಮತ್ತು ಬೂತ್ ಸಮಿತಿ ಸಭೆ ನಡೆಸಿ, ಪಕ್ಷದ ಪರವಾಗಿ ಮತಯಾಚಿಸಿದರು.

ಹಿ೦ದುಳಿದ ವರ್ಗಗಳು ರಾಜಕೀಯವಾಗಿ ಜಾಗೃತರಾಗಿದ್ದು, ದಶಕಗಳಿ೦ದ ತಮ್ಮನ್ನು ಓಟ್ ಬ್ಯಾ೦ಕ್ ನ೦ತೆ ಉಪಯೋಗಿಸಿಕೊಳ್ಳುತ್ತಿರುವವರ ವಿರುದ್ಧ ಸೆಟೆದು ನಿ೦ತಿದ್ದಾರೆ. ಇಡೀ ದೇಶದಲ್ಲಿ ಹಿ೦ದುಳಿದ ವರ್ಗಗಳು ಬಿಜೆಪಿಯನ್ನು ಸಮರ್ಥಿಸುತ್ತಿದ್ದಾರೆ. ನ೦ಜನಗೂಡಿನ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವರು ಈ ಎಲ್ಲ ಶೋಷಿತ ವರ್ಗಗಳ ಸ್ವಾಭಿಮಾನದ ಪ್ರತೀಕವಾಗಿ ಸ್ಪರ್ಧಿಸುತ್ತಿದ್ದು, ಅವರಿಗೆ ನಿಮ್ಮ ಬೆ೦ಬಲವೆ೦ದರೆ, ನಿಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದ೦ತೆ ಎ೦ದು ಶ್ರೀ ಯಡಿಯೂರಪ್ಪನವರು ಹೇಳಿದರು.

ಈ ಸಂದರ್ಭ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: