ಮೈಸೂರು

ಅಪರಿಚಿತ ವ್ಯಕ್ತಿಯ ಶವ ಪತ್ತೆ : ವಾರಸುದಾರರಿದ್ದಲ್ಲಿ ಸಂಪರ್ಕಿಸಲು ಕೋರಿಕೆ

ಮೈಸೂರು,ಸೆ.1:- ಸುಮಾರು 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತ ದೇಹವೊಂದು ಪತ್ತೆಯಾಗಿದ್ದು ಶವಾಗಾರದ ಶೈತ್ಯಾಗಾರದಲ್ಲಿ ಇರಿಸಲಾಗಿದೆ.

ನಂಜನಗೂಡು ಪಟ್ಟಣದ ಮುಡಿಕಟ್ಟೆಯ ಬಳಿ ಕಪಿಲಾ ನದಿಯಲ್ಲಿ ಸುಮಾರು 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತ ದೇಹ ದೊರೆತಿದ್ದು ಈ ಬಗ್ಗೆ ಕೇಸು ದಾಖಲಾಗಿದೆ. ಮೃತ ಗಂಡಸಿನ ವಿಳಾಸವನ್ನು ಮತ್ತು ವಾರಸುದಾರರನ್ನು ಪತ್ತೆ ಮಾಡಬೇಕಾಗಿರುವುದರಿಂದ ಹಾಗೂ ನಂಜನಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಶೈತ್ಯಗಾರದ ಅನುಕೂಲ ಇಲ್ಲದೇ ಇರುವುದರಿಂದ ಈ ಅಪರಿಚಿತ ಗಂಡಸಿನ ಶವವನ್ನು 31.08.2020 ರಿಂದ 04.09 2020 ರವರೆಗೆ ಒಟ್ಟು 5 ದಿನಗಳು ಸರ್ಕಾರಿ ಮಡಿಕಲ್ ಕಾಲೇಜಿನ ಆಸ್ಪತ್ರೆಯ ಶವಾಗಾರದ ಶೈತ್ಯಾಗಾರದಲ್ಲಿ ಇರಿಸಲಾಗಿದೆ ಸಂಬಂಧಪಟ್ಟ ವಾರಸುದಾರರು ಶವಾಗಾರದಲ್ಲಿ ಮೃತದೇಹ ತೆಗೆದುಕೊಂಡು ಹೋಗುವಂತೆ ನಂಜನಗೂಡು ಪಟ್ಟಣ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: