ಕರ್ನಾಟಕನಮ್ಮೂರುಮೈಸೂರು

ದಸರಾ ಹಿನ್ನೆಲೆ ಮೈಸೂರಿನಲ್ಲಿ ಪೊಲೀಸ್ ಕಣ್ಗಾವಲು

ಮೈಸೂರು ದಸರಾ ಉತ್ಸವ ಅಕ್ಟೋಬರ್ 1ರಿಂದ ಆರಂಭಗೊಂಡು 11ಕ್ಕೆ ಸಮಾರೋಪಗೊಳ್ಳಲಿದೆ. ನಗರದ ವಿವಿಧೆಡೆ ಸಾಂಸ್ಕೃತಿಕ ಸೇರಿದಂತೆ ಹಲವು ಕಾರ್ಯಕ್ರಮಗಳು  ನಡೆಯಲಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.

ಪೊಲೀಸ್  ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 4214 ಸಿವಿಲ್/ಟ್ರಾಫಿಕ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಆರ್.ಎ.ಎಫ್ ಮತ್ತು ಮೈಸೂರು ಕಮಾಂಡೋ ಪಡೆಯ 80 ಕಮಾಂಡೋಗಳು, 46 ಕೆ.ಎಸ್.ಆರ್.ಪಿ ಮತ್ತು ಸಿ.ಎ.ಆರ್ ತುಕಡಿಗಳು, 49ಭದ್ರತಾ ತಪಾಸಣೆ ಪಡೆಗಳು, 1400ಹೋಂ ಗಾರ್ಡ್ಸ್ ಗಳನ್ನು ನಿಯೋಜಿಸಲಾಗಿದೆ.

ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ಅಪರಾಧಿಗಳು ಆಗಮಿಸಿ ಅಪರಾಧ ಕೃತ್ಯವೆಸಗುವುದನ್ನು ತಡೆಯುವ ನಿಟ್ಟಿನಲ್ಲಿ ನುರಿತ  ಅಪರಾಧ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಪಿಕ್ ಪಾಕೆಟರ್ಸ್ ಮತ್ತಿತರ ಕಳುವು ಅಪರಾಧಿಗಳ ವಿರುದ್ಧ ಭದ್ರತಾ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ನಗರದ 20 ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯವಾಣಿ ತೆರೆಯಲಾಗಿದೆ. ಅಹಿತಕರ ಘಟನೆಗಳು ನಡೆದಲ್ಲಿ ಸ್ಥಳಕ್ಕೆ ತೆರಳಲು ಉತ್ತಮ ಗಸ್ತುವಾಹನ ವ್ಯವಸ್ಥೆ ಮಾಡಲಾಗಿದೆ. 10 ಅಗ್ನಿಶಾಮಕ ದಳಗಳು, 10ಆ್ಯಂಬುಲೆನ್ಸ್ ನಿಯೋಜಿಸಲಾಗಿದೆ. ಈಗಾಗಲೇ ಅಳವಡಿಸಿರುವ ಸಿಸಿ ಕ್ಯಾಮರಾಗಳ ಜೊತೆ ಮೈಸೂರು ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ ಸೇರಿದಂತೆ ಇತರ ಪ್ರಮುಖ ಸ್ಥಳಗಳಲ್ಲಿ 47ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, 24ಗಂಟೆಯೂ ರೆಕಾರ್ಡ್ ಆಗಲಿದೆ ಎಂದು ತಿಳಿಸಿದರು.

ಸೈಕಲ್ ಪ್ಯೂರ್ ಅಗರ್‍ಬತ್ತೀಸ್‍ನಿಂದ ಸಂಚಾರಿ ಪೊಲೀಸರಿಗೆ 350 ಜಾಕೆಟ್: ಸೈಕಲ್ ಪ್ಯೂರ್ ಅಗರ್‍ಬತ್ತೀಸ್ ತನ್ನ ಸಮುದಾಯ ಕಾರ್ಯಕ್ರಮದ ಅಂಗವಾಗಿ ಗುರುವಾರದಂದು ಮೈಸೂರು ನಗರ ಸಂಚಾರಿ ಪೊಲೀಸರಿಗೆ 350 ಜಾಕೆಟ್‍ಗಳನ್ನು ವಿತರಿಸಿತು.

ಅಭಿವೃದ್ಧಿಯನ್ನು ಬಲಪಡಿಸುವ ಬಗ್ಗೆ ವಾಗ್ದಾನ ನೀಡಿರುವ ದೃಷ್ಟಿಯಿಂದ ಸೈಕಲ್ ಪ್ಯೂರ್ ಅಗರ್‍ಬತ್ತೀಸ್‍ ಸಂಚಾರಿ ಪೊಲೀಸರಿಗೆ ಜಾಕೆಟ್‍ಗಳನ್ನು ನೀಡಿದೆ. ಎನ್‍.ಆರ್‍. ಗ್ರೂಪ್‍ನ ಅಧ್ಯಕ್ಷ ಆರ್.ಗುರು ಮಾತನಾಡಿ, ನಾವು ಯಾವಾಗಲು ಸಮಾಜಕ್ಕೆ ಮರಳಿ ಏನು ನೀಡುತ್ತೇವೆ ಎಂದು ಯೋಚಿಸಬೇಕು. ಸಮಾಜದಲ್ಲಿ ಶಿಸ್ತನ್ನು ಕಾಪಾಡಲು ಸಹಾಯ ಮಾಡುವವರಿಗೆ ಕಿರು ಕಾಣಿಕೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಬಿ. ದಯಾನಂದ, ಯಶಸ್ವಿನಿ ಸೋಮಶೇಖರ್ ಮತ್ತು ಕೈಗಾರಿಕೋದ್ಯಮಿ ಜಗನ್ನಾಥ್ ಶೆಣೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: