ಪ್ರಮುಖ ಸುದ್ದಿ

ಅನಂತ ಚತುರ್ದಶಿ ಕಲಶ ಪ್ರತಿಷ್ಠಾಪನೆ : ನೈವೇದ್ಯ ಸಮರ್ಪಣೆ

ರಾಜ್ಯ( ಮಂಗಳೂರು)ಸೆ.2:- ಶ್ರೀ ಅನಂತ ಚತುರ್ದಶಿ ( ನೋಪಿ ) ವ್ರತ ಪ್ರಯುಕ್ತ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಚಾತುರ್ಮಾಸ್ಯ ವ್ರತ ಆಚರಿಸುತ್ತಿರುವ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಸಂಸ್ಥಾನದ ದೇವರ ಸಮ್ಮುಖದಲ್ಲಿ ವಿಶೇಷವಾಗಿ ಅನಂತ ಚತುರ್ದಶಿ ಕಲಶ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿತು.
ಶ್ರೀ ದೇವರಿಗೆ ವಿಶೇಷ ವಾಗಿ ತಯಾರಿಸಲ್ಪಟ್ಟ ನೈವೇದ್ಯ ಸಮರ್ಪಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: