ಮೈಸೂರು

ಪ್ರಾಣಿ ಪಕ್ಷಿಗಳಿಗೆ ಹಣ್ಣು-ಹಂಪಲು ವಿತರಣೆ

ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ವತಿಯಿಂದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ನಂದಿಯ ಆವರಣದಲ್ಲಿ ಮಂಗಗಳಿಗೆ ಹಾಗೂ ಪಕ್ಷಿಗಳಿಗೆ ನೀರುಣಿಸಿ ಹಣ್ಣು ಹಂಪಲು, ಕಾಳುಗಳನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ, ಪರಿಸರ ಪ್ರೇಮಿ ಟಿ. ಮಹದೇವಸ್ವಾಮಿ ಮಾತನಾಡಿ ಬೇಸಿಗೆ ಕಾಲದ ಆರಂಭದಲ್ಲೇ ಹೆಚ್ಚಿರುವ ಶಾಖದ ಝಳಕ್ಕೆ  ಪ್ರಾಣಿಗಳು ಕಂಗೆಟ್ಟಿವೆ.  ಪ್ರಾಣಿ ಹಾಗೂ ಪಕ್ಷಿಗಳ ಸಂತತಿಯನ್ನು  ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ.  ಈ ನಿಟ್ಟಿನಲ್ಲಿ ಎಲ್ಲರೂ ಅವುಗಳಿಗೆ ಸಾಧ್ಯವಾದಷ್ಟು ಆಹಾರ ಹಾಗೂ ನೀರನ್ನು ನೀಡಿ ಪೋಷಿಸಬೇಕು ಎಂದರು

ವೇದಿಕೆಯ ಖಜಾಂಚಿ ನಾಗರಾಜಪ್ಪ, ಜಿಲ್ಲಾಧ್ಯಕ್ಷ ನಯನ್‍ಗೌಡ, ರಾಜ್ಯ ಕಾರ್ಯದರ್ಶಿ ಮ.ನ.ಲತಾಮೋಹನ್ ಮತ್ತಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: