ಪ್ರಮುಖ ಸುದ್ದಿಮೈಸೂರು

ಇನ್ಮುಂದೆ ಆನ್ಲೈನ್ ನಲ್ಲೂ ರೈಲ್ವೆ ಮ್ಯೂಸಿಯಂ ದರ್ಶನ : ವೆಬ್ ಸೈಟ್ ವೀಕ್ಷಣೆಗೆ ಚಾಲನೆ ನೀಡಿದ ಸಂಸದ ಪ್ರತಾಪ್ ಸಿಂಹ


ಮೈಸೂರು,ಸೆ.2:- ಇನ್ಮುಂದೆ ಆನ್ಲೈನ್ ನಲ್ಲೂ ರೈಲ್ವೆ ಮ್ಯೂಸಿಯಂ ದರ್ಶನವಾಗಲಿದೆ. ರೈಲ್ವೆ ಇಲಾಖೆ ಸಂಪೂರ್ಣ ರೈಲ್ವೆ ಮ್ಯೂಸಿಯಂ ಆನ್ಲೈನ್ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ರೈಲ್ವೆ ಮ್ಯೂಸಿಯಂ ಡಿಜಿಟಲೀಕರಣ ಮಾಡಿದ್ದು, ವೆಬ್ ಸೈಟ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.
ಇಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವೆಬ್ ಸೈಟ್ ವೀಕ್ಷಣೆಗೆ ಚಾಲನೆ ನೀಡಿದರು. ಬಳಿಕ ರೈಲ್ವೆ ಅಧಿಕಾರಿಗಳೊಂದಿಗೆ ಮ್ಯೂಸಿಯಂ ವೀಕ್ಷಣೆ ಮಾಡಿದರು. ಮಿನಿ ರೈಲಿನಲ್ಲಿ ಸಂಚರಿಸಿದರು. ಸಂಸದರಿಗೆ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗ್ ಸೇರಿ ಇತರ ಅಧಿಕಾರಿಗಳು ಸಾಥ್ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: