ಮೈಸೂರು

ಕೆರೆಯಲ್ಲಿ ಎಟಿಎಂ ಯಂತ್ರ ಪತ್ತೆ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮದಲಹಳ್ಳಿ ಕೆರೆಯಲ್ಲಿ ಮೀನು ಹೀಡಿಯಲು ಹೋದ ಕೆಲ ಯುವಕರಿಗೆ  ಎಟಿಎಂ ಡಬ್ಬ ಕಂಡು ಬಂದಿದೆ.

ಎಟಿಎಂ ರೀತಿಯ ಕಬ್ಬಿಣದ ಡಬ್ಬ ಇರುವುದು ತಿಳಿದು ಪಟ್ಟಣದ ಪೋಲಿಸರಿಗೆ ಮೀನುಗಾರರು ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪಟ್ಟಣದ ಪೋಲಿಸರು ಕಬ್ಬಿಣದ ಪೆಟ್ಟಿಗೆಯನ್ನು ಪರಿಶೀಲಿಸಿ ನೋಡಿದಾಗ ಅದು ಎಟಿಎಂ ಯಂತ್ರ ಎಂದು ತಿಳಿದು ಬಂದಿದೆ.
ಸುಮಾರು ತಿಂಗಳಿನಿಂದ ಎಟಿಎಂ ಯಂತ್ರದ ಪೆಟ್ಟಿಗೆ ನೀರಿನಲ್ಲಿ ಇರಬಹುದು ಎಂದು ಪೋಲಿಸರು ಅನುಮಾನ ವ್ಯಕ್ತ ಪಡಿಸಿ. ಯಂತ್ರವನ್ನು ಟ್ರಾಕ್ಟರ್ ಮೂಲಕ ಪಟ್ಟಣದ ಗ್ರಾಮಾಂತರ ಠಾಣೆಯಲ್ಲಿ ಸ್ಥಳಾಂತರಿಸಿ ಪರಿಶೀಲನೆ ನಡೆಸಿದರು. ಇನ್ನೂ ಎಟಿಎಂ ಯಂತ್ರ ಎಲ್ಲಿಯದು, ಕೆರೆಯಲ್ಲಿ ಹೇಗೆ ಬಂತು ಎಂಬುದು ತಿಳಿದು ಬಂದಿಲ್ಲ, ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ನಂತರ ಘಟನಾ‌ ಸ್ಥಳಕ್ಕೆ ಆಗಮಿಸಿದ ಸಿಪಿಐ ಹರೀಶ್ ಬಾಬುರವರು ಸ್ಥಳವನ್ನು ಪರೀಶಿಲಿಸಿ ಮುಂದಿನ ತನಿಖೆಯನ್ನ ಕೈಗೊಳ್ಳುವುದಾಗಿ  ಹೇಳಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: