ಸುದ್ದಿ ಸಂಕ್ಷಿಪ್ತ

ಕೆ.ಬಸವರಾಜುಗೆ ಪಿ.ಎಚ್.ಡಿ ಪದವಿ

ರಾಜ್ಯ( ಮಡಿಕೇರಿ) ಸೆ.2 :- ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದ ಕೆ.ಬಸವರಾಜ್ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಸೋಮಣ್ಣ ಹೊಂಗಳ್ಳಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಮಹಾಕಾವ್ಯ ಪರಂಪರೆಯಲ್ಲಿ ಸುಜನಾ ಅವರ ಯುಗಸಂಧ್ಯಾ ಮಹಾಕಾವ್ಯ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಪಿ.ಎಚ್.ಡಿ ಪದವಿಯನ್ನು ನೀಡಿದೆ. ಇವರು 2020ರ ಸೆ.1 ರಿಂದ ಹನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: