ಸುದ್ದಿ ಸಂಕ್ಷಿಪ್ತ

ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಮೈಸೂರು, ಸೆ.3:- 2001- 02 ರಿಂದ 2010-11, 2013-14 ರಿಂದ 2014-15 ಮತ್ತು 2019-20ರ ಶೈಕ್ಷಣಿಕ ಸಾಲಿನ ಬಿ.ಎ/ಬಿ.ಕಾಂ ಪದವಿ ಹಾಗೂ 2001-02 ರಿಂದ 2014-15 ಮತ್ತು 2018-19 ರಿಂದ 2019-20ನೇ ಶೈಕ್ಷಣಿಕ ಸಾಲಿನ ಎಂ.ಎ/ಎಂ.ಕಾಂ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಈ ಹಿನ್ನಲೆ ರಾಜ್ಯದ 15 ಪರೀಕ್ಷೆ ಕೇಂದ್ರಗಳಲ್ಲಿ ಬಿ.ಎ/ಬಿ.ಕಾಂ ಪದವಿಗಳಿಗೆ ಸೆಪ್ಟೆಂಬರ್ 18 ರಿಂದ ಮತ್ತು ಎಂ.ಎ/ ಎಂ.ಕಾಂ ಪದವಿಗಳಿಗೆ ಅಕ್ಟೋಬರ್ 10 ರಿಂದ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಯನ್ನು ಹೊರಡಿಸಲಾಗಿದೆ.
ಪರೀಕ್ಷೆ ವೇಳಾಪಟ್ಟಿ ಹಾಗೂ ಪರೀಕ್ಷಾ ಪ್ರವೇಶಾತಿ ಪ್ರತಿಯನ್ನು ವಿಶ್ವವಿದ್ಯಾನಿಲಯದ ವೆಬ್ಸೈಟ್ www.ksoumysuru.ac.in ಅಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 0821-2519947, 9663482133, 9663482311 ಅನ್ನು ಸಂಪರ್ಕಿಸಬಹುದು ಎಂದು ಪರೀಕ್ಷಾಂಗ ಕುಲಸಚಿವರಾದ ಡಾ.ಕವಿತಾ ರೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: