ಮೈಸೂರು

ಮೃಗಾಲಯ ಪ್ರಾಣಿಗಳ ಸಂರಕ್ಷಣೆಗೆ 2.02 ಲಕ್ಷ ಸಂಗ್ರಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಎಸ್

ಮೈಸೂರು, ಸೆ.3:- ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಶಾರದಾ-ಜ್ಞಾನಾಕ್ಷಿ ಬಡಾವಣೆಯ ನಿವಾಸಿಗಳಿಂದ 2.02 ಲಕ್ಷ ರೂ. ಸಂಗ್ರಹಿಸಿ ಮೈಸೂರು ಮೃಗಾಲಯದ ಆನೆ, ಎರಡು ನವಿಲು, ಮಲಬಾರ್ ಜೈಂಟ್ ಅಳಿಲು ಮತ್ತು ನೀಲ್ಗಿರಿ ಲಂಗೂರ್ ಪ್ರಾಣಿ-ಪಕ್ಷಿಗಳನ್ನು 24-07-2020 ರಿಂದ 23-07-2021 ರ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಲು ನೀಡಿರುತ್ತಾರೆ.
ಶಾರದ-ಜ್ಞಾನಾಕ್ಷಿ ಬಡಾವಣೆಯ ನಿವಾಸಿಗಳಿಂದ ಸಂಗ್ರಹವಾದ 2.02 ಲಕ್ಷಗಳ ಡಿ.ಡಿ.ಯನ್ನು ಮೃಗಾಲಯಕ್ಕೆ ಹಸ್ತಾಂತರಿಸಿ, ಪ್ರಾಣಿಗಳ ಸಂರಕ್ಷಣೆ ಮತ್ತು ಮೃಗಾಲಯ ನಿರ್ವಹಣೆಗೆ ಸಹಕರಿಸಿದ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಶಾರದ-ಜ್ಞಾನಾಕ್ಷಿ ಬಡಾವಣೆಯ ನಿವಾಸಿಗಳಿಗೆ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: