
ಮೈಸೂರು,ಸೆ.3:- ಚಂದನವನದ ಅಭಿನಯ ಚಕ್ರವರ್ತಿ ಖ್ಯಾತಿಯ ಕಿಚ್ಚ ಸುದೀಪ್ ಇಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದರು.
ನಟ ಕಿಚ್ಚ ಸುದೀಪ್ ನಿನ್ನೆ ತಮ್ಮ 48ನೇ ಜನುಮದಿನವನ್ನು ಆಚರಿಸಿಕೊಂಡರು. ಇಂದು ಬೆಳ್ಳಂಬೆಳಿಗ್ಗೆ ಮೈಸೂರಿಗೆ ಆಗಮಿಸಿದ ನಟ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಅವರ ಕೆಲವು ಅಭಿಮಾನಿಗಳು ಸ್ಥಳದಲ್ಲಿದ್ದರು. (ಕೆ.ಎಸ್,ಎಸ್.ಎಚ್)