ಪ್ರಮುಖ ಸುದ್ದಿ

ಕೊರೋನಾ ಮಹಾಮಾರಿಗೆ ಫೋಟೋಗ್ರಾಫರ್ ಬಲಿ

ರಾಜ್ಯ(ಬೆಂಗಳೂರು)ಸೆ.3:- ಕೊರೋನಾ ಮಹಾಮಾರಿಗೆ ಫೋಟೋಗ್ರಾಫರ್ ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ 33 ವರ್ಷದ ಫೋಟೊ ಗ್ರಾಫರ್ ರಘು ಕೊರೋನಾಗೆ ಬಲಿಯಾದವರು. ರಘು ಕಳೆದ ಒಂದು ವಾರದಿಂದ ಎಂಎಸ್ ಪಾಳ್ಯದ ನಾಗಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕಳಿಸುವ ನೆಪದಲ್ಲಿ ನಾಗಪ್ಪ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆದಲ್ಲಿ ರಘು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ನಡುವೆ ಮಗನ ಸಾವಿನ ನೋವಿನಿಂದ ನೊಂದ ಪೋಷಕರು ನಾಗಪ್ಪ ಆಸ್ಪತ್ರೆಗೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ನಾಗಪ್ಪ ಆಸ್ಪತ್ರೆ ಎದುರು 30ಕ್ಕೂ ಹೆಚ್ಚು ಫೋಟೊ ಗ್ರಾಫರ್ ಜಮಾಯಿಸಿದ್ದಾರೆ ಎನ್ನಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: