ಪ್ರಮುಖ ಸುದ್ದಿ

ಮೂವರು ಆರ್ ಪಿಎಫ್ ಯೋಧರಿಗೆ ಜೀವನ್ ರಕ್ಷಾ ಪದಕ ಪ್ರದಾನಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ದೇಶ(ನವದೆಹಲಿ)ಸೆ.3:- ರೈಲ್ವೆ ಸಂರಕ್ಷಣಾ ಪಡೆ ಸಿಬ್ಬಂದಿಗಳಾದ ಜಗ್ಬೀರ್ ಸಿಂಗ್, ಶಿವ ಚರಣ್ ಸಿಂಗ್ ಮತ್ತು ಮುಖೇಶ್ ಕುಮಾರ್ ಮೀನಾ ಅವರಿಗೆ ಜೀವನ್ ರಕ್ಷಕ ಪದಕವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರದಾನಿಸಿದ್ದಾರೆ.
ರೈಲ್ವೆ ಆವರಣದಲ್ಲಿ ನಾಲ್ಕು ಮಕ್ಕಳನ್ನು ಉಳಿಸುವಾಗ ಆರ್ಪಿಎಫ್ನ ಜಗ್ಬೀರ್ ಸಿಂಗ್ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಭಾರೀ ಪ್ರವಾಹದಲ್ಲಿ ಸಿಲುಕಿದ್ದ ಒಂಭತ್ತು ಮಂದಿಯನ್ನು ಶಿವಚರಣ್ ಸಿಂಗ್ ರಕ್ಷಿಸಿದ್ದಾರೆ. ಮುಖೇಶ್ ಮೀನಾ ಮಹಿಳಾ ಪ್ರಯಾಣಿಕರು ಮತ್ತು ಅವರ ಇಬ್ಬರು ಮಕ್ಕಳ ಪ್ರಾಣ ಉಳಿಸಿದ್ದಾರೆ. ಮೂವರೂ ಪ್ಲಾಟ್ಫಾರ್ಮ್ ಮತ್ತು ರೈಲಿನ ನಡುವಿರುವ ಗ್ಯಾಪ್ ನಲ್ಲಿ ಜಾರಿ ಬಿದ್ದಿದ್ದರು.
ಸಂಕಷ್ಟದಲ್ಲಿ ಸಿಲುಕಿದ ವ್ಯಕ್ತಿಯ ಪ್ರಾಣ ಉಳಿಸಲು ಮತ್ತು ಸಹಾಯ ಮಾಡಲು ಮಾನವ ಸ್ವಭಾವದ ಶ್ಲಾಘನೀಯ ಕಾರ್ಯಕ್ಕಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ನೀರಲ್ಲಿ ಮುಳುಗುವಿಕೆ, ಅಪಘಾತ, ಬೆಂಕಿ ಘಟನೆ, ಮಿಂಚು, ನೈಸರ್ಗಿಕ ವಿಪತ್ತುಗಳು, ಗಣಿಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸುವಾಗ ನಡೆಯುವ ಅಪಾಯದ ಸನ್ನಿವೇಶದಲ್ಲಿ ಪ್ರಾಣ ರಕ್ಷಿಸಿದ್ದಕ್ಕೆ ನೀಡಲಾಗುತ್ತದೆ.
ಮಾನವ ಜೀವ ರಕ್ಷಣೆಗೆ ಸಹಕರಿಸಿದವರಿಗೆ ಜೀವನ್ ರಕ್ಷಾ ಪದಕ ಸರಣಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ, ಇದರಲ್ಲಿ ಸರ್ವೋತ್ತಮ ಜೀವನ್ ರಕ್ಷಾ ಪದಕ, ಮತ್ತು ಉತ್ತಮ್ ಜೀವನ್ ರಕ್ಷಾ ಪದಕ, ಜೀವನ್ ರಕ್ಷಾ ಪದಕ ಸೇರಿವೆ. ಪ್ರಶಸ್ತಿ ಪುರಸ್ಕೃತರಿಗೆ ಗೃಹ ಸಚಿವರು ಸಹಿ ಮಾಡಿದ ಪ್ರಮಾಣಪತ್ರ ಮತ್ತು ನಗದು ಮೊತ್ತವನ್ನು ನೀಡಲಾಗುತ್ತದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: