ಕರ್ನಾಟಕ

ನೆರೆಹಾನಿ ಸಮೀಕ್ಷೆಗೆ ಸೆ.7ಕ್ಕೆ ಕೇಂದ್ರದಿಂದ ತಂಡ ಆಗಮನ: ಸಚಿವ ಆರ್.ಅಶೋಕ್

ಬೆಂಗಳೂರು,ಸೆ.3-ರಾಜ್ಯದಲ್ಲಿ ನೆರೆಹಾನಿ ಸಮೀಕ್ಷೆಗಾಗಿ ಸೆ.7ಕ್ಕೆ ಕೇಂದ್ರದ ತಂಡ ಆಗಮಿಸಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಸೆ.7ರಂದು ಕೇಂದ್ರದ ಆರು ಸದಸ್ಯರನ್ನೊಳಗೊಂಡ ತಂಡವು ಬೆಂಗಳೂರಿಗೆ ಆಗಮಿಸಲಿದ್ದು, ಮೊದಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಕೊಡಗು, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ತೆರಳಿ ನೆರೆ ಹಾನಿಯ ಸಮೀಕ್ಷೆ ನಡೆಸಲಿದ್ದಾರೆ. ಇನ್ನೂ 4800 ಕೋಟಿ ಪರಿಹಾರದ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: