ಮೈಸೂರು

ನರೆಡ್ಕೊ ಮೈಸೂರು ಗೌರವ ಸದಸ್ಯರಾಗಿ ಹೆಚ್.ವಿ.ರಾಜೀವ್ ಆಯ್ಕೆ

ಮೈಸೂರು, ಸೆ.3:- ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್‍ಮೆಂಟ್ ಕೌನ್ಸಿಲ್ (ನರೆಡ್ಕೊ) ಮೈಸೂರು ವತಿಯಿಂದ ನರೆಡ್ಕೊ ಮೈಸೂರು ಘಟಕದ ಗೌರವ ಸದಸ್ಯರಾಗಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರನ್ನು ಇತ್ತೀಚೆಗೆ ನೇಮಕಗೊಳಿಸಲಾಯಿತು ಹಾಗೂ ನೇಮಕಗೊಂಡ ಆದೇಶ ಪತ್ರ ಮತ್ತು ಫಲಕಗಳನ್ನು ನೀಡಿ ಮುಡಾ ಕಛೇರಿಯಲ್ಲಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಪ್ರಸ್ತುತ ಮುಡಾ ಎಫ್.ಎ.ಆರ್.ರನ್ನು ಹೆಚ್ಚಿಸುವುದರ ಬಗ್ಗೆ ಮತ್ತು ಮುಡಾ ಸಭೆಗಳನ್ನು ನಿರಂತರವಾಗಿ ಆಯೋಜಿಸುವುದರ ಬಗ್ಗೆ ಮತ್ತು ನಕ್ಷೆ ಅನುಮೋದನೆಯನ್ನು ಏಕಗವಾಕ್ಷಿಯ ಮೂಲಕ ಒದಗಿಸುವುದು, ಡೀಮಡ್ ಅಪ್ರೂವಲ್ ಬಗ್ಗೆ ಸೂಕ್ತ ಸಮಯಾವಕಾಶದಲ್ಲಿ ಬಿಲ್ಡರ್ಸ್ ಮತ್ತು ಡೆವಲಪರ್ಸ್‍ಗಳ ಸಮಸ್ಯೆಯನ್ನು ನಿವಾರಿಸುವುದು ಹಾಗೂ ಮುಡಾದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಮುಡಾ ನೂತನ ಅಧ್ಯಕ್ಷ ಹೆಚ್.ವಿ.ರಾಜೀವ್‍ ಮಾತನಾಡಿ, ಬಡಜನರಿಗೆ ನಿವೇಶನ ಮತ್ತು ಸೂರನ್ನು ಒದಗಿಸುವುದು, ಮೈಸೂರು ನಗರದ ಎಲ್ಲ ಉದ್ಯಾನವನಗಳನ್ನು ನಗರ ಅರಣಿಕರಿಸುವುದು ಮತ್ತು ಮೈಸೂರು ನಗರಕ್ಕೆ ಬೇಕಾದ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಮುಡಾ ವತಿಯಿಂದ ಒದಗಿಸಿ ಮತ್ತಷ್ಟು ಸುಂದರ ನಗರವನ್ನಾಗಿಸುವುದು ನನ್ನ ದೃಢ ಸಂಕಲ್ಪ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನರೆಡ್ಕೊ ಮೈಸೂರು ಅಧ್ಯಕ್ಷ ಟಿ.ಜಿ.ಆದಿಶೇಷನ್‍ಗೌಡ, ಉಪಾಧ್ಯಕ್ಷ ಎಸ್.ಫಣಿರಾಜ್, ಛೇರ್ಮನ್ ಎನ್.ದಿವ್ಯೇಶ್, ಕಾರ್ಯದರ್ಶಿ ಎಂ.ಎಲ್.ನಾಗೇಶ್, ನರೆಡ್ಕೊ ಕರ್ನಾಟಕ ನಿಕಟಪೂರ್ವ ಅಧ್ಯಕ್ಷ ಮನೋಜ್ ಲೋಧ, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ಹಾಗೂ ನರೆಡ್ಕೊ ಮೈಸೂರು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. (ಜಿ.ಕೆ)

Leave a Reply

comments

Related Articles

error: