ಮೈಸೂರು

ಅಪ್ರಾಪ್ತನಿಂದ ಬಾಲಕಿಯ ಅತ್ಯಾಚಾರ : ಬಂಧನ

ಅಪ್ರಾಪ್ತ ಬಾಲಕನೋರ್ವ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ಬಾಲಕನನ್ನು ಬಂಧಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಬಂಧಿತನನ್ನು ಮೈಸೂರಿನ ಮಂಡಿಮೊಹಲ್ಲಾ ಬಿ.ಬಿ.ಕೇರಿಯ ನಿವಾಸಿ ಎಂದು ಹೇಳಲಾಗಿದೆ. ಈತ ತನ್ನ ಪಕ್ಕದ ಮನೆಯ ಬಾಲಕಿಯನ್ನು ನಿರಂತರ ಅತ್ಯಾಚಾರ ನಡೆಸಿದ್ದ. ಪರಿಣಾಮ ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದು ಮನೆಯವರ ಗಮನಕ್ಕೆ ಬಂದಿದೆ. ವಿಚಾರಿಸಲಾಗಿ ಬಾಲಕ ನಡೆಸಿದ ಕೃತ್ಯದ ಕುರಿತು ವಿವರಿಸಿದ್ದಾಳೆ. ಎನ್.ಆರ್.ಠಾಣೆಗೆ ಪಾಲಕರು ಈ ಕುರಿತು ದೂರು ನೀಡಿದ್ದು, ಪೊಲೀಸರು ಆತನನ್ನು ಪೋಕ್ಸೋ ಕಾಯಿದೆ ಅಡಿ  ಬಂಧಿಸಿ ಬಾಲಮಂದಿರದ ವಶಕ್ಕೆ ನೀಡಿದ್ದಾರೆ.

ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: