
ಮೈಸೂರು
ಮೈಸೂರು ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ
ಮೈಸೂರು,ಸೆ.4:- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಹಲವರು ಒಂದು ವರ್ಷದ ಅವಧಿಗೆ ಪ್ರಾಣಿ ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ.
ಜೈಪುರ್ ಮೂಲದ ಸಾರ್ಥಕ್ ಗುಪ್ತ ಎಂಬವರು 35,000 ರೂ. ಪಾವತಿಸಿ ಮೃಗಾಲಯದ ‘ಕಪ್ಪು ಚಿರತೆ, ಮೈಸೂರಿನ ಆಸರೆ ಫೌಂಡೇಶನ್ಸ್ ವತಿಯಿಂದ 7,500 ರೂ. ಪಾವತಿಸಿ ಸರಸ್ ಕ್ರೇನ್ ಅನ್ನು ದತ್ತು ಸ್ವೀಕರಿಸಿದ್ದಾರೆ.
ಬೆಂಗಳೂರಿನ ಪವನ್ ಕಿರಣ್ ನಟರಾಜ್ ಎಂಬವರು 3 ಸಾವಿರ ರೂ. ಪಾವತಿಸಿ ನಾಗರ ಹಾವು ಮತ್ತು ಲವ್ ಬರ್ಡ್, ರಂಗೇಗೌಡ ಎಂ.ಆರ್. ಮತ್ತು ನಾಗರತ್ನ ಹೆಚ್.ವಿ ಎಂಬವರು 20 ಸಾವಿರ ರೂ. ಪಾವತಿಸಿ ಪ್ಲೆಮಿಂಗೊ, ಶಿವ ಸೈನ್ಯ ವತಿಯಿಂದ 13,500 ರೂ. ಪಾವತಿಸಿ ಬಿಳಿ ನವಿಲು ಮತ್ತು ಹಸಿರು ಅನಕೊಂಡ, ಸ್ವೀಕೃತಿ ಎಸ್. ಎಂಬುವವರು 7,500 ರೂ. ಪಾವತಿಸಿ ಸ್ಕಾರ್ಲೆಟ್ ಮೆಕಾವ್ ಅನ್ನು ದತ್ತು ಪಡೆದಿದ್ದಾರೆ.
ಮೈಸೂರಿನ ಶ್ರೀಧರ್ ಡಿ. ಭಟ್ ಮತ್ತು ರೇಖಾ ಎಂಬವರು 5 ಸಾವಿರ ರೂ. ಪಾವತಿಸಿ ಆಮೆ-2 ಮತ್ತು ಲವ್ ಬರ್ಡ್ ಅನ್ನು 1 ವರ್ಷದ ಅವಧಿಗೆ ದತ್ತು ಸ್ವೀಕರಿಸಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)