ಮೈಸೂರು

ಬಾಲ್ಕನಿ ಬಾಗಿಲು ಮುರಿದು ರಿವಾಲ್ವರ್, ಚಿನ್ನಾಭರಣ ಕದ್ದೊಯ್ದ ಕಳ್ಳರು

ಮೈಸೂರು,ಸೆ.4:- ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಯೊಂದರ ಬಾಲ್ಕನಿ ಬಾಗಿಲನ್ನು ಮುರಿದ ಕಳ್ಳರು ಮನೆಯಲ್ಲಿದ್ದ ರಿವಾಲ್ವರ್ ಹಾಗೂ ಚಿನ್ನಾಭರಣವನ್ನು ಕದ್ದು ಪರಾರಿಯಾದ ಘಟನೆ ವಿಜಯನಗರದ ಒಂದನೇ ಹಂತದಲ್ಲಿ ನಡೆದಿದೆ.
ವಿಜಯ ನಗರದ ಒಂದನೇ ಹಂತದ 5ನೇ ಮೇನ್ ನಲ್ಲಿರುವ ಕವಿತಾ ಎಂಬವರ ಮನೆಯ ಬಾಲ್ಕನಿಯ ಬಾಗಿಲನ್ನು ಮುರಿದ ಕಳ್ಳರು ಮನೆಯಲ್ಲಿರಿಸಿದ್ದ ರಿವಾಲ್ವರ್ ಮತ್ತು 34ಸಾವಿರ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳುವು ಮಾಡಿದ್ದಾರೆ. ಕವಿತಾ ಅವರು ಮನೆಗೆ ಬೀಗ ಹಾಕಿ ತೆರಳಿದ್ದಾಗ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: