ಮೈಸೂರು

ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಪ್ರಯುಕ್ತ ವಿತರಕರ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಮೈಸೂರು,ಸೆ.4:- ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯ ಪ್ರಯುಕ್ತ ಇಂದು ಹಿರಿಯ ಸಾಹಿತಿ ಡಾ ಸಿ ಪಿ ಕೃಷ್ಣಕುಮಾರ್ ಅವರ ನಿವಾಸದಲ್ಲಿ ನೋಟ್ ಬುಕ್ ಹಾಗೂ ವಿದ್ಯಾವಶ್ಯ ಸಾಮಗ್ರಿಗಳನ್ನು ಅವಶ್ಯವಿರುವ ಪತ್ರಿಕಾ ವಿತರಕರ ಮಕ್ಕಳಿಗೆ ವಿತರಿಸಲಾಯಿತು.
ಈ ವೇಳೆಯಲ್ಲಿ ಮಾತನಾಡಿದ ಡಾ. ಸಿಪಿಕೃಷ್ಣಕುಮಾರ್ ಪತ್ರಿಕಾ ರಂಗ ನಮ್ಮ ಸಮಾಜದ ನಾಲ್ಕನೇ ಸ್ಥಂಭ. ಅದು ಸಕಾರಾತ್ಮಕವಾಗಿ ಕಾರ್ಯ ನಿರ್ವಹಣೆ ಮಾಡಬೇಕು. ಕೊರೋನಾ ವಾರಿಯರ್ಸ ಅಂತೆ ಪತ್ರಿಕಾ ವಿತರಕರು ಹಾಗೂ ಪತ್ರಿಕೆ ಹಂಚುವ ಮಂದಿ ಸಮಾಜದ ವಾರಿಯರ್ಸ ಎಂದು ಬಿಂಬಿಸಿದರು. ಮಳೆ ಚಳಿ ಎನ್ನದೆ ನಾವು ಕಣ್ಣು ಬಿಡುವ ಮೊದಲೇ ದೇಶದ ವಿದ್ಯಮಾನಗಳನ್ನು ನಮ್ಮ ಮನೆಯಂಗಳಕ್ಕೆ ತಲುಪಿಸುವ ನಿಮ್ಮ ಕಾರ್ಯ ಶ್ಲಾಘನೀಯ ಎಂದರು
ಈ ವೇಳೆಯಲ್ಲಿ ಪತ್ರಿಕಾ ಪ್ರತಿನಿಧಿಗಳ ಸಂಘದ ಹಾಗೂ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಎ ರವಿ, ಅಧ್ಯಕ್ಷ ಸತೀಶ್ ಗೌಡ, ಉಪಾಧ್ಯಕ್ಷ ಕುಮಾರ್ ಗೌಡ, ದಿ ಮೈಸೂರು ಕೋಪರೇಟಿವ್ ಬ್ಯಾಂಕ್ ನಿರ್ದೇಶಕರಾದ ರವಿ ರಾಜಕೀಯ, ದಂತವೈದ್ಯ ಡಾ ಲೋಕೇಶ್, ಮುಖಂಡರಾದ ಅರುಣ್ ಕುಮಾರ್, ಸ್ವರೂಪ್, ಜಗದೀಶ್ ಉಪಸ್ಥಿತರಿದ್ದರು. (ಜಿ.ಕೆ, ಎಸ್.ಎಚ್)

Leave a Reply

comments

Related Articles

error: