ದೇಶ

ಛತ್ತೀಸ್ ಗಢದಲ್ಲಿ ಟ್ರಕ್-ಬಸ್ ನಡುವೆ ಅಪಘಾತ: ಏಳು ಮಂದಿ ದುರ್ಮರಣ

ರಾಯ್ಪುರ,ಸೆ.5-ಟ್ರಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆ ಛತ್ತೀಸ್ಗಢದ ರಾಯ್ಪುರ ಸಮೀಪ ಇಂದು ಬೆಳ್ಳಂಬೆಳಗ್ಗೆ ನಡೆದಿದೆ.

ಕಾರ್ಮಿಕರನ್ನು ಒಡಿಶಾದ ಗಂಜಾಂನಿಂದ ಗುಜರಾತ್ನ ಸೂರತ್ ಗೆ ಕರೆದೊಯ್ಯುತ್ತಿದ್ದ ಬಸ್ ಮತ್ತು ಟ್ರಕ್ ರಾಯ್ಪುರ ಸಮೀಪ ಚೇರಿ ಖೇಡಿ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿವೆ. ಏಳು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಏಳು ಕಾರ್ಮಿಕರು ಗಂಭೀರಗಾಯಗೊಂಡಿದ್ದು, ಅವರನ್ನು ಸೇರಿಸಿ ಉಳಿದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣದ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಪರಿಹಾರ ಘೋಷಣೆ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಪಘಾತದಲ್ಲಿ ತೊಂದರೆಗೀಡಾದವರ ಕುಟುಂಬಗಳ ನೆರವಿಗೆ ತಕ್ಷಣ ಧಾವಿಸುವಂತೆ ಸಿಎಂ ನವೀನ್ ಪಟ್ನಾಯಕ್ ಸಚಿವ ಸುಶಾಂತ್ ಸಿಂಗ್ ಅವರಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: