ಪ್ರಮುಖ ಸುದ್ದಿ

ಕರ್ನಾಟಕದಲ್ಲಿ 9,319 ಹೊಸ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆ

ರಾಜ್ಯ(ಬೆಂಗಳೂರು)ಸೆ.7:- ಕರ್ನಾಟಕದಲ್ಲಿ 9,319 ಹೊಸ ಕೊರೋನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಮೂರು ಲಕ್ಷ 98 ಸಾವಿರದ ಗಡಿ ದಾಟಿದೆ.
ಬಾಗಲಕೋಟೆ 180, ಬಳ್ಳಾರಿ 396, ಬೆಳಗಾವಿ 427, ಬೆಂಗಳೂರು ಗ್ರಾಮಾಂತರ 93, ಬೆಂಗಳೂರು ನಗರ 2,824, ಬೀದರ್ 83, ಚಾಮರಾಜನಗರ 41, ಚಿಕ್ಕಬಳ್ಳಾಪುರ 81, ಚಿಕ್ಕಮಗಳೂರು 239, ಚಿತ್ರದುರ್ಗ 261, ದಕ್ಷಿಣಕನ್ನಡ 326, ದಾವಣಗೆರೆ 221, ಧಾರವಾಡ 311, ಗದಗ 194 ,ಹಾಸನ 324, ಹಾವೇರಿ 295, ಕಲಬುರಗಿ 165, ಕೊಡಗು 38,ಕೋಲಾರ 119,ಕೊಪ್ಪಳ 198,ಮಂಡ್ಯ 230,ಮೈಸೂರು 686,ರಾಯಚೂರು 187,ರಾಮನಗರ 68,ಶಿವಮೊಗ್ಗ 329,ತುಮಕೂರು 304,ಉಡುಪಿ 217,ಉತ್ತರಕನ್ನಡ 247,ವಿಜಯಪುರ 96,ಯಾದಗಿರಿ 139 ಪತ್ತೆಯಾಗಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 3,98,551 ಕ್ಕೆ ಏರಿದೆ.
9,575ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 2,92,873ಕ್ಕೇರಿದೆ. 99,266 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಫಲಿಸದೇ 95 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 6,393ಕ್ಕೇರಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: