ಪ್ರಮುಖ ಸುದ್ದಿ

ಮೆಟ್ರೋ ರೈಲಿನಲ್ಲಿ ಸಂಚರಿಸಿದ ಸಚಿವ ಶ್ರೀರಾಮುಲು

ರಾಜ್ಯ( ಬೆಂಗಳೂರು)ಸೆ.8:- ಕೊರೋನಾ ಹಿನ್ನೆಲೆಯಲ್ಲಿ ಸುಮಾರು 5 ತಿಂಗಲಿಂದ ಸ್ಥಗಿತಗೊಂಡಿದ್ದ ಸಂಚಾರ ಆರಂಭಗೊಂಡಿದ್ದು, ಮೆಟ್ರೊ ರೈಲಿನಲ್ಲಿ ಆರೋಗ್ಯ ಸಚಿವ‌ ಬಿ. ಶ್ರೀರಾಮುಲು ಪ್ರಯಾಣಿಸಿದರು.

ವಿಧಾನಸೌಧ ನಿಲ್ದಾಣದಿಂದ ಮೆಜೆಸ್ಟಿಕ್ ವರೆಗೆ ಸಂಚರಿಸಿದರು. ಈ ವೇಳೆ ಪ್ರಯಾಣಿಕರ ಸುರಕ್ಷತೆಗೆ ಬಿಎಂಆರ್‌ಸಿಎಲ್ ಕೈಗೊಂಡಿರುವ ಕ್ರಮಗಳನ್ನು‌ ಪರಿಶೀಲಿಸಿದರು.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ಭಯ ಬೇಡ, ಆದರೆ ಎಚ್ಚರಿಕೆ ಅಗತ್ಯ. ಎಲ್ಲ ಪ್ರಯಾಣಿಕರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಚಿವರು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: