ಕ್ರೀಡೆಪ್ರಮುಖ ಸುದ್ದಿ

ಜನ್ಮದಿನದಂದು ನಿಶ್ಚಿತಾರ್ಥ ಮಾಡಿಕೊಂಡ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ


ದೇಶ(ನವದೆಹಲಿ)ಸೆ.8:- ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಅವರಿಗೆ ಸ್ಮರಣೀಯ ದಿನವಾಗಿ ಉಳಿದಿದೆ.
ದಕ್ಷಿಣಭಾರತದ ಚಿತ್ರ ತಾರೆ ನಟ, ಅವರ ಗೆಳೆಯ ವಿಷ್ಣು ವಿಶಾಲ್ ನಿಶ್ಚಿತಾರ್ಥದ ಉಂಗುರವನ್ನು ತೊಡಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಜ್ವಾಲಾ ಅವರು ವಿಶಾಲ್ ಅವರೊಂದಿಗಿನ ಸಂಬಂಧದ ಬಗ್ಗೆ ಟ್ವಿಟರ್ ಮೂಲಕ ತಿಳಿಸಿದ್ದರು. ವಿಶಾಲ್ ಜ್ವಾಲಾ ಅವರ ಜನ್ಮದಿನದಂದೇ ಜೀವನಸಾಥಿಯಾಗಿ ಬರುವಂತೆ ಕೇಳಿಕೊಂಡಿದ್ದಾರೆ.
ವಿಶಾಲ್ ನಿಶ್ಚಿತಾರ್ಥದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ “ಜ್ವಾಲಾ ಜನ್ಮದಿನದ ಶುಭಾಶಯಗಳು. ಹೊಸ ಜೀವನದ ಆರಂಭ ಸಕಾರಾತ್ಮಕವಾಗಿರಲಿ. ನಮಗೆ, ಆರ್ಯನ್, ನಮ್ಮ ಕುಟುಂಬಗಳು, ಸ್ನೇಹಿತರು ಮತ್ತು ನಮ್ಮ ಸುತ್ತಮುತ್ತಲಿನ ಜನರ ಉತ್ತಮ ಭವಿಷ್ಯದತ್ತ ಕೆಲಸ ಮಾಡೋಣ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು ಎಂದಿದ್ದಾರೆ.

ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಆಗಿದ್ದ ಡಬಲ್ಸ್ ಸ್ಪೆಷಲಿಸ್ಟ್ ಜ್ವಾಲಾ ಕೂಡ ತಮ್ಮ ಪೋಸ್ಟ್‌ನೊಂದಿಗೆ ಪ್ರತಿಕ್ರಿಯಿಸಿ, “ಚಿಯರ್ಸ್ ಫಾರ್ ಎ ಫ್ರೆಶ್ ಸ್ಟಾರ್ಟ್” ಎಂದು ಹಾರ್ಟ್ ಎಮೋಜಿಯೊಂದಿಗೆ ಬರೆದುಕೊಂಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: