ಮೈಸೂರು

ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿ ಸಾವು

ಮೈಸೂರು,ಸೆ.8:- ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿಯೋರ್ವ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.
ಮೃತ ಖೈದಿಯನ್ನು ಮಂಡ್ಯ ಜಿಲ್ಲೆ ಮುತ್ತತ್ತಿಯ ಲಾಳನಕೆರೆ ಗ್ರಾಮದ ನಿವಾಸಿ ಶಿವಪ್ಪ(55) ಎಂದು ಹೇಳಲಾಗಿದೆ. ಈತ ಅನಾರೋಗ್ಯದಿಂದ ಬಳಲುತ್ತಿದ್ದ. ಶಿವಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಎನ್ನಲಾಗಿದೆ.
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: