ಪ್ರಮುಖ ಸುದ್ದಿಮನರಂಜನೆಮೈಸೂರು

ಬ್ಲಾಕ್ ಫ್ಯಾಂಥರ್ ದತ್ತು ಸ್ವೀಕರಿಸಿದ ನಟ ಧನ್ವೀರ್

ಮೈಸೂರು,ಸೆ.9:- ಮೈಸೂರು ಮೃಗಾಲಯಕ್ಕೆ ಯುವ ನಟ ಧನ್ವೀರ್ ಇಂದು ಭೇಟಿ ನೀಡಿದರು.
ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿ ದತ್ತು ಸ್ವೀಕರಿಸಿದರು.
ಧನ್ವೀರ್ ಎರಡು ದಿನಗಳ ಹಿಂದಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇಂದು ಸ್ನೇಹಿತರು ಹಾಗೂ ಅಭಿಮಾನಿಗಳ ಜೊತೆ ಮೃಗಾಲಕ್ಕೆ ಭೇಟಿ ನೀಡಿ ಬ್ಲಾಕ್ ಫ್ಯಾಂಥರ್ ದತ್ತು ಸ್ವೀಕರಿಸಿದರು.
35ಸಾವಿರೂ ಹಣ ನೀಡಿ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದು, ಪ್ರಾಣಿ ದತ್ತು ಪಡೆದು ಮೃಗಾಲಯ ಸಿಬ್ಬಂದಿಯಿಂದ ಪ್ರಮಾಣ ಪತ್ರ ಸ್ವೀಕರಿಸಿದರು.
ಇದೇ ವೇಳೆ ಅಭಿಮಾನಿಗಳು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದರು. ಈ ವೇಳೆ ಪಾರಿವಾಳ ಹಾರಿ ಬಿಟ್ಟರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: