ಮೈಸೂರು

ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭ

ಮೈಸೂರು,ಸೆ.10:- ವಿಶ್ವವಿಖ್ಯಾತ ನಾಡಹಬ್ಬ ದಸರಾ ಆಚರಣೆಗೆ ಅರಣ್ಯ ಇಲಾಖೆ ಸಜ್ಜುಗೊಂಡಿದ್ದು, ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, 5-6 ಆನೆಗಳನ್ನು ಮಾತ್ರ ಬಳಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಅರಣ್ಯ ಇಲಾಖೆ, ವಿವಿಧ ಆನೆ ಕ್ಯಾಂಪ್ನಲ್ಲಿ ಆನೆಗಳ ಪರಿಶೀಲನೆ ಕಾರ್ಯ ಆರಂಭಿಸಿದೆ. ಡಿಸಿಎಫ್ ಅಲೆಕ್ಸಾಂಡರ್ ಹಾಗೂ ವೈದ್ಯರು ಆನೆಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಕೇವಲ 5-6 ಆನೆಗಳು ಮಾತ್ರವೇ ದಸರೆಯಲ್ಲಿ ಭಾಗವಹಿಸಲಿದ್ದು, ಪಟ್ಟದ ಆನೆಯಾಗಿ ವಿಕ್ರಮ, ನಿಶಾನೆ ಆನೆಯಾಗಿ ಗೋಪಿ, ಕುಂಕಿ ಆನೆಯಾಗಿ ವಿಜಯ ಹಾಗೂ ಕಾವೇರಿ ಆನೆಗಳನ್ನು ಬಳಸುವುದು ಬಹುತೇಕ ಅಂತಿಮಗೊಂಡಿದೆ. ಆದರೆ ಅಂಬಾರಿ ಆನೆ ಆಯ್ಕೆ ವಿಚಾರದಲ್ಲಿ ಈವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಹಿಂದೆ ಅಂಬಾರಿ ಹೊರುತ್ತಿದ್ದ ಅರ್ಜುನನ ಬದಲಾಗಿ ಅಭಿಮನ್ಯುವಿಗೆ ಅಂಬಾರಿ ಕಟ್ಟುವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: