ಮೈಸೂರು

ಪುಣ್ಯಾನಂದಪುರಿ ಮಹಾಸ್ವಮೀಜಿಯವರ ಪುಣ್ಯಸ್ಮರಣೆ: ಟ್ಯಾಕ್ಸಿ ಚಾಲಕರಿಗೆ ಸಮವಸ್ತ್ರ ವಿತರಣೆ

ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಹಾಗೂ ವಾಲ್ಮೀಕಿ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಪುಣ್ಯಾನಂದಪುರಿ ಮಹಾಸ್ವಮೀಜಿಯವರ 10ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಟ್ಯಾಕ್ಸಿ ಚಾಲಕರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಜಗನ್ಮೋಹನ ಅರಮನೆಯ ಎದುರು ಇರುವ ಸಂಘದ ಕಚೇರಿಯಲ್ಲಿ ಟ್ಯಾಕ್ಸಿ ಚಾಲಕರಿಗೆ ಸಮವಸ್ತ್ರ ವಿತರಿಸಿದ ಶಿರಾ ತಾಲೂಕಿನ ಶಿಡ್ಲೆಕೋಣ ವಾಲ್ಮೀಕಿ ಮಠದ ಸಂಜಯ್ ಕುಮಾರ್ ಸ್ವಾಮೀಜಿ ಮಾತನಾಡಿ ಪುಣ್ಯಾನಂದಪುರಿ ಸ್ವಾಮೀಜಿಯವರು ಸಮಾಜಕ್ಕೆ ಉತ್ತಮವಾದ ಕಾಣಿಕೆ ನೀಡಿದ್ದಾರೆ. ಅವರು ಸರಳ ಜೀವನವನ್ನು ನಡೆಸುತ್ತಿದ್ದು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಯಾವ ರೀತಿ ಸೂಕ್ಷ್ಮತೆಯಿಂದ ಬಗೆಹರಿಸಿ ಕೊಳ್ಳಬೇಕೆಂಬ ಉತ್ತಮ ಅಂಶಗಳನ್ನು ಜನಸಾಮಾನ್ಯರಿಗೆ ತಿಳಿಸುತ್ತಿದ್ದರು. ಅಲ್ಲದೆ ಅವರು ಸಮಾಜಮುಖಿ ಕೆಲಸಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಅಂಥಹವರ ಪುಣ್ಯಸ್ಮರಣೆಯನ್ನು ಮಾಡುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು.
ಇಂದು ಸಮಾಜದಲ್ಲಿ ಅನೇಕ ಗೊಂದಲುಗಳು ಉಂಟಾಗಿದ್ದು ಅವುಗಳಿಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಜೀವನದ ಜಂಜಾಟದಲ್ಲಿ ಮನಸ್ಸಿನ ಶಾಂತಿಯನ್ನೇ ಕಳೆದುಕೊಂಡಿದ್ದು ಮರಳಿ ಪಡೆಯಬೇಕಿದೆ. ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ಸಾರ್ವಜನಿಕರು ಮಾನವೀಯ ಮೌಲ್ಯಗಳನ್ನೇ ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುಣ್ಯಾನಂದಪುರಿ ಸ್ವಾಮೀಜಿಗಳು ಹೆಚ್ಚು ಪ್ರಸ್ತುತವಾಗುತ್ತಾರೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿಯೊಂದಿಗೆ ಸುಂದರ ಬದುಕು ನಮ್ಮದಾಗುತ್ತದೆ. ಇಲ್ಲದಿದ್ದರೆ ಜೀವನವಿಡೀ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಶ್ರೀಧರ್ ಚಾಮುಂಡಿ ಬೆಟ್ಟ, ಸುರೇಶ್ ಕುಮಾರ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: