
ಪ್ರಮುಖ ಸುದ್ದಿವಿದೇಶ
ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ-ಚೀನಾ ರಾಜಿ : ಮೂಲಗಳ ಹೇಳಿಕೆ
ವಿದೇಶ(ಮಾಸ್ಕೋ)ಸೆ.11:- ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ಕುರಿತಂತೆ ಮಾಹಿತಿಯೊಂದು ಹೊರಬಿದ್ದಿದೆ.
ರಷ್ಯಾದ ಮಾಸ್ಕೋದಲ್ಲಿ ನಡೆದ ವಿದೇಶಾಂಗ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿಯಾಗಿದ್ದು, ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಉಭಯ ದೇಶಗಳು ಒಪ್ಪಿಕೊಂಡಿವೆ. ಗಡಿ ವಿವಾದವನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ. 5 ಅಂಶಗಳ ಸೂತ್ರವನ್ನು ಉಭಯ ದೇಶಗಳ ನಡುವೆ ಇಡಲಾಗಿದ್ದು ಸಹಮತಿ ನಿಡಿವೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ.
ಭಾರತ ಮತ್ತು ಚೀನಾ ನಡುವಿನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ಎಲ್ಎಸಿ (ಲೈನ್ ಆಫ್ ಟೋಟಲ್ ಕಂಟ್ರೋಲ್) ಮೇಲೆ ನಡೆಯುತ್ತಿರುವ ಉದ್ವಿಗ್ನತೆಯನ್ನು ಹೆಚ್ಚಿಸಲು ಭಾರತ ಬಯಸುವುದಿಲ್ಲ ಎಂದು ಮಾಸ್ಕೋದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ಅದೇ ವೇಳೆ ಚೀನಾಕ್ಕಾಗಿ ಭಾರತದ ನೀತಿಯಲ್ಲಿ ಮತ್ತು ಭಾರತದ ಬಗೆಗಿನ ಚೀನಾದ ನೀತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ .
ಎರಡು ನೆರೆಯ ರಾಷ್ಟ್ರಗಾಗಿರುವ ಚೀನಾ ಮತ್ತು ಭಾರತದ ಗಡಿಯಲ್ಲಿ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯವು ಹೇಳಿದೆ ಎನ್ನಲಾಗಿದೆ. ಆದರೆ ಇದು ಸಹಜ. ಅತ್ಯಗತ್ಯ ಸಂಗತಿಯೆಂದರೆ ಆ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸರಿಯಾದ ದೃಷ್ಟಿಕೋನದಲ್ಲಿ ನೋಡಬೇಕಿದೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮಾಸ್ಕೋದಲ್ಲಿ ಭೇಟಿಯಾಗಿದ್ದು, ಉಭಯ ನಾಯಕರ ನಡುವಿನ ಸಭೆ ರಾತ್ರಿ 8 ಗಂಟೆಗೆ ಕಾಂಗ್ರೆಸ್ ಪಾರ್ಕ್ ವೊಲ್ಕೊನ್ಸ್ಕಿ ಹೋಟೆಲ್ನಲ್ಲಿ ಪ್ರಾರಂಭವಾಗಿ ಸುಮಾರು 10: 30 ಕ್ಕೆ ಕೊನೆಗೊಂಡಿದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)