ಮೈಸೂರು

ಗೊಲ್ಲಗೇರಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ

ಮೈಸೂರು,ಸೆ.11:- ಮೈಸೂರು ಜಿಲ್ಲಾ ಯಾದವ( ಗೊಲ್ಲ) ಯುವ ಸಂಘದ ವತಿಯಿಂದ 38ನೇ ವರ್ಷದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಗೊಲ್ಲಗೇರಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಬ್ ಇನ್ಸಪೆಕ್ಟರ್ ಸಾಲಿಗ್ರಾಮ ಪೊಲೀಸ್ ಠಾಣೆಯ. ಟಿ. ಆರತಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನೃತ್ಯಪಟು ಕಾರ್ತಿಕ್ ಹಾಗೂ ನಿವೃತ್ತ ರೈಲ್ವೆ ನ್ಯಾಯಾಲಯದ ನಾಗೇಂದ್ರ ಯಾದವ್ ಇವರುಗಳನ್ನು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯ ಪ್ರಮೀಳಾ ಭರತ್, ಯುವ ಯಾದವ ಸಂಘದ ಅಧ್ಯಕ್ಷ ಶಿವಾನಂದ್ ಕೆ, ಗೋಪಿನಾಥ , ಪತ್ರಕರ್ತ ಯಶವಂತ್ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: