ಕರ್ನಾಟಕಮನರಂಜನೆ

ಕನ್ನಡದ ಖ್ಯಾತ ಗೀತ ರಚನೆಕಾರ ತಂಗಾಳಿ ನಾಗರಾಜ್ ನಿಧನ

ಬೆಂಗಳೂರು,ಸೆ.12-ಸ್ಯಾಂಡಲ್ ವುಡ್ ನ ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

‘ತಂಗಾಳಿ ಎಲ್ಲಿಂದ ಬೀಸುವೆ’ ಹಾಡು ಬರೆದು ಖ್ಯಾತರಾದ ನಾಗರಾಜ್ ಆ ನಂತರ ತಂಗಾಳಿ ನಾಗರಾಜ್ ಎಂದೇ ಪರಿಚಿತರಾದರು. ತಂಗಾಳಿ ನಾಗರಾಜ್ ಅವರ ನಿಧನಕ್ಕೆ ಗೀತರಚನೆಕಾರ ಕವಿರಾಜ್ ಸೇರಿದಂತೆ ಇತರ ಗೀತ ರಚನೆಕಾರರು, ಸಂಗೀತ ನಿರ್ದೇಶಕರು, ತಾರೆಯರು ಸಂತಾಪ ಸೂಚಿಸಿದ್ದಾರೆ.

ನಾಗರಾಜ್ ಅವರು ಕಳೆದ ಹದಿನೈದು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರರಾಗಿ ಕೆಲಸ ಮಾಡುತ್ತಿದ್ದು, ಕಲಾಸಿಪಾಳ್ಯದ ‘ಧೂಳ್ ಮಗಾ ಧೂಳ್’ ಹಾಡು ಸೇರಿ ನೂರಾರು ಸೂಪರ್ ಹಿಟ್ ಹಾಡುಗಳನ್ನು ಬರೆದಿದ್ದಾರೆ. (ಎಂ.ಎನ್)

Leave a Reply

comments

Related Articles

error: