ಮೈಸೂರು

ಡ್ರಗ್ಸ್ ದಂಧೆ ವಿಚಾರದಲ್ಲಿ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು : ಶಾಸಕ ತನ್ವೀರ್ ಸೇಠ್

ಮೈಸೂರು,ಸೆ.12:- ಡ್ರಗ್ಸ್ ದಂಧೆ ವಿಚಾರದಲ್ಲಿ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು. 
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆ ವಿಚಾರದಲ್ಲಿ ಸಿನಿಮಾ ತಾರೆ, ಉದ್ಯಮಿ ಹಾಗೂ ರಾಜಕಾರಣಿಗಳ ಹೆಸರು ಬರುತ್ತಿದೆ. ಆದರೆ ಇಂತಹ ಆರೋಪ ಪ್ರತ್ಯಾರೋಪಗಳು ಸಾಮಾನ್ಯವಾದರೂ, ತನಿಖೆಯಿಂದಷ್ಟೇ ಇದು ಖಾತ್ರಿಯಾಗಬೇಕು. ಆರೋಪಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದರು.
ಇದು ಮಾರಾಟಗಾರರು, ಖರೀದಿದಾರರು ಯಾರೇ ಇರಲಿ ಶಿಕ್ಷೆ ಆಗಲೇಬೇಕು. ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಬೇಡ. ಅವರು ಯಾವ ಜಾತಿಯವರಾದರೂ ತಪ್ಪು ತಪ್ಪೇ. ಸಮಾಜದ ವಿರುದ್ದ ನಡೆಯುವ ಕೃತ್ಯಗಳಿಗೆ ಕ್ಷಮೆ ಇಲ್ಲ. ಹೀಗಾಗಿ ಸತ್ಯಶೋಧನೆ ಪ್ರತಿಯೊಬ್ಬರು ಮಾಡಿಕೊಳ್ಳಲಿ. ಈ ಹಿಂದೆ ಗಾಂಜಾ ವಿಚಾರವಾಗಿ ಮೈಸೂರಿನಲ್ಲಿ, ತನ್ನದಲ್ಲದ ತಪ್ಪಿಗೆ ಪೊಲೀಸ್ ಅಧಿಕಾರಿಯೊಬ್ಬರು ಸಸ್ಪೆಂಡ್ ಆಗಿದ್ದರು. ಅವರಿಗೆ ಸೇರಿದ ನಾಲ್ಕು ಎಕರೆ ಜಮೀನು ಗುತ್ತಿಗೆಗೆ ಕೊಡಲಾಗಿತ್ತು. ಗುತ್ತಿಗೆ ಪಡೆದಿದ್ದ ವ್ಯಕ್ತಿ ಜಮೀನಿನಲ್ಲಿ ಗಾಂಜಾ ಬೆಳೆದಿದ್ದರೂ, ಆ ಕಾರಣಕ್ಕಾಗಿ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಗಾಂಜಾ ವಿಚಾರದಲ್ಲಿ ರೈತರು ಎಚ್ಚರಿಕೆಯಿಂದಿರಬೇಕು, ಡ್ರಗ್ಸ್ ವಿಚಾರದಲ್ಲಿ ಸಮಗ್ರವಾದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: