ಮೈಸೂರು

ವ್ಯಕ್ತಿ ನೇಣಿಗೆ ಶರಣು

ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ ವ್ಯಕ್ತಿಯೋರ್ವ ಅನ್ಯರ ತೋಟದಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದೆ.

ಮೃತನನ್ನು ಚನ್ನಪಟ್ಟಣ ನಿವಾಸಿ ಗವಿಸಿದ್ದೇಗೌಡ(42) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನಲ್ಲಿ ವೀಳ್ಯದೆಲೆ ಮಾರಾಟ ಮಾಡಿಕೊಂಡಿದ್ದ. ಕಳೆದೊಂದು ವರ್ಷದ ಹಿಂದೆ ಪತ್ನಿಯಿಂದ ದೂರವಾಗಿದ್ದು, ಒಬ್ಬನೇ ವಾಸಿಸುತ್ತಿದ್ದ ಎನ್ನಲಾಗಿದೆ. ಭಾನುವಾರ ಬೆಂಗಳೂರಿನಿಂದ ಮೈಸೂರಿಗೆ ಬಂದು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಯೊಂದರ ತೋಟದಲ್ಲಿ ಹಲಸಿನ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. ತೋಟದ ಮಾಲಿಕರು ಬೆಳಿಗ್ಗೆ ತೋಟಕ್ಕೆ ತೆರಳಿದಾಗ ವಿಷಯ ತಿಳಿದುಬಂದಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶವವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: