ಮೈಸೂರು

ಮೈಸೂರಿನಲ್ಲಿ ಭಾರೀ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿದ ಉರಗತಜ್ಞ ಸ್ನೇಕ್ ಶ್ಯಾಂ

ಮೈಸೂರು,ಸೆ.13:- ಮೈಸೂರಿನಲ್ಲಿ ಭಾರೀ ಗಾತ್ರದ ಹೆಬ್ಬಾವೊಂದನ್ನು ಉರಗ ತಜ್ಞ ಸೆರೆ ಹಿಡಿದಿದ್ದಾರೆ.

ಕುವೆಂಪು ನಗರ ಎಂ ಬ್ಲಾಕ್ ಬಳಿ ಹೆಬ್ಬಾವು ಸೆರೆ ಹಿಡಿದಿದ್ದು, ಬೃಹತ್ ಗಾತ್ರದ ಹಾವು ನೋಡಿ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ನೇಕ್ ಶ್ಯಾಮ್ ಗೆ ಕರೆಮಾಡಿ ಮಾಹಿತಿ ನೀಡಿದ್ದು
ಸ್ಥಳಕ್ಕಾಗಮಿಸಿದ ಉರಗತಜ್ಞ ಸ್ನೇಕ್ ಶ್ಯಾಮ್ ಮತ್ತವರ ಪುತ್ರ ಸೂರ್ಯ ಕೀರ್ತಿ ಹೆಬ್ಬಾವು ರಕ್ಷಣೆ ಮಾಡಿದ್ದಾರೆ.
ಹೆಬ್ಬಾವನ್ನು ಸೆರೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ.

ನಗರದ ಹೃದಯ ಭಾಗದಲ್ಲಿ‌ ಹೆಬ್ಬಾವು ನೋಡಿ ಆತಂಕಗೊಂಡಿದ್ದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: