ಕ್ರೀಡೆಪ್ರಮುಖ ಸುದ್ದಿ

ಕ್ರಿಕೆಟಿಗ‌ ಎಸ್‌. ಶ್ರೀಶಾಂತ್ ನಿಷೇಧ ಅವಧಿಗೆ ಮುಕ್ತಿ : ನಾನೀಗ ಸಂಪೂರ್ಣ ಸ್ವತಂತ್ರ ಎಂದ ಶ್ರೀಶಾಂತ್

ದೇಶ(ನವದೆಹಲಿ)ಸೆ.14:- ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಲುಕಿ 7 ವರ್ಷಗಳ ನಿಷೇಧಕ್ಕೊಳಗಾಗಿದ್ದ ಕ್ರಿಕೆಟಿಗ‌ ಎಸ್‌. ಶ್ರೀಶಾಂತ್‌ ಈಗ ಮುಕ್ತರಾಗಿದ್ದಾರೆ. ಅವರ ನಿಷೇಧ ಅವಧಿ ಕೊನೆಗೊಂಡಿದ್ದು, ತಾನೀಗ ಸ್ವತಂತ್ರ ಎಂಬುದಾಗಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನಾನೀಗ ಸಂಪೂರ್ಣ ಸ್ವತಂತ್ರ. ನನ್ನ ಮೇಲೀಗ ಯಾವುದೇ ಆರೋಪಗಳಿಲ್ಲ. ನಾನು ಅತಿಯಾಗಿ ಪ್ರೀತಿಸುವ ಕ್ರೀಡೆಯನ್ನು ಪ್ರತಿನಿಧಿಸಬಹುದಾಗಿದೆ. ಈಗಲೇ ಅಭ್ಯಾಸ ಆರಂಭಿಸಿ ಪ್ರತೀ ಎಸೆತದಲ್ಲೂ ಅತ್ಯುತ್ತಮ ನಿರ್ವಹಣೆ ನೀಡುವುದು ನನ್ನ ಗುರಿ. ಇನ್ನೂ ಕೆಲವು ವರ್ಷಗಳ ಕಾಲ ಆಡುವ ಸಾಮರ್ಥ್ಯ ನನ್ನಲ್ಲಿದೆ. ಯಾವ ತಂಡವನ್ನು ಪ್ರತಿನಿಧಿಸಿದರೂ ಶ್ರೇಷ್ಠ ಬೌಲಿಂಗ್‌ ನಡೆಸುವುದು ನನ್ನ ಗುರಿ’ ಎಂಬುದಾಗಿ 37 ವರ್ಷದ ಶ್ರೀಶಾಂತ್‌ ಹೇಳಿದ್ದಾರೆ.

ನಾನು ಫ್ರೆಂಡ್ಲಿ ಮ್ಯಾಚ್‌ ಆಡುವಾಗಲೂ ಕ್ರಿಕೆಟಿಗೆ ಮೋಸ ಮಾಡಿದವನಲ್ಲ. ತಂಡ ಸೋಲಬೇಕೆಂದು ಬಯಸಿದವನಲ್ಲ. ನಿಧಾನ ಗತಿಯಲ್ಲಿ ಚೆಂಡು ಎಸೆದವನೂ ಅಲ್ಲ. ನನ್ನ ಬಗ್ಗೆ ವ್ಯತಿರಿಕ್ತ ಭಾವನೆಗಳಿದ್ದರೆ ದಯವಿಟ್ಟು ಬದಲಾಯಿಸಿಕೊಳ್ಳಿ ಎಂದು ಶ್ರೀಶಾಂತ್‌ ಇತ್ತೀಚೆಗೆ ಹೇಳಿದ್ದರು.

2013ರ ಐಪಿಎಲ್‌ ಪಂದ್ಯಾವಳಿಯ ವೇಳೆ ಸ್ಪಾಟ್‌ ಫಿಕ್ಸಿಂಗ್‌ ಆರೋಪದಡಿ ಶ್ರೀಶಾಂತ್‌ ಗೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಆದರೆ 6 ವರ್ಷಗಳ ಶಿಕ್ಷೆ ಪೂರ್ತಿಗೊಂಡ ಬಳಿಕ, ಕಳೆದ ವರ್ಷ ಬಿಸಿಸಿಐ ಒಂಬುಡ್ಸ್‌ಮನ್‌ ಡಿ.ಕೆ. ಜೈನ್‌ ಈ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: