ಮೈಸೂರು

ಆಪ್ ನಿಂದ ಆಕ್ಸಿ ಮಿತ್ರ ಅಭಿಯಾನ – ಆಕ್ಸಿ ಮಿತ್ರರಾಗಿ ಜೀವ ಉಳಿಸಿ!

ಮೈಸೂರು,ಸೆ.14:- ಆಮ್ ಆದ್ಮಿ ಪಾರ್ಟಿ ಮೈಸೂರು ಜಿಲ್ಲಾ ಘಟಕ ಹೆಬ್ಬಾಳು 2ನೆಯ ಹಂತದಲ್ಲಿ “ಆಕ್ಸಿ ಮಿತ್ರ” ಅಭಿಯಾನ ಅಡಿಯಲ್ಲಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನಡೆಸುತ್ತಿದೆ. ಆಪ್ ಮೈಸೂರು ಜಿಲ್ಲಾ ಅಧ್ಯಕ್ಷೆ ಮಾಲವಿಕ ಗುಬ್ಬಿವಾಣಿ ಅವರೊಂದಿಗೆ ಪಕ್ಷದ ಕಾರ್ಯಕರ್ತರಾದ ಕೆ. ಎಂ. ಶಿವಕುಮಾರ, ರಾಜು ಆಧ್ಯ, ರೇಣುಕಾ ಪ್ರಸಾದ್ ಮತ್ತು ನಸೀರ್ ಕೋರಿಕರ್ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ.

ಮಾಲವಿಕ ಗುಬ್ಬಿವಾಣಿ ಅವರ ಪ್ರಕಾರ ಆಕ್ಸಿ ಮೀಟರ್ ಸಹಾಯದಿಂದ ಕೋವಿಡ್-19 ರೋಗ ಗುಣಲಕ್ಷಣವಿಲ್ಲದ ಸೋಂಕಿತರನ್ನು ತ್ವರಿತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಕೋವಿಡ್-19 ಸೋಂಕಿತರಲ್ಲಿ ಜ್ವರ, ನೆಗಡಿ, ಕೆಮ್ಮು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುವ ಮುಂಚೆ ರಕ್ತದಲ್ಲಿ ಆಗುವ ಪ್ರಾಣವಾಯುವಿನ ಕೊರತೆ ಇನ್ನೂ ಹೆಚ್ಚು ಅಪಾಯಕಾರಿ. ಇದರ ಸುಳಿವು ಮುಂಚಿತವಾಗಿ ಸಿಕ್ಕಲ್ಲಿ, ಅಂತಹವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಉಪಚಾರ ನೀಡಿ, ಅವರ ಪ್ರಾಣ ಉಳಿಸಬಹುದು. ದೆಹಲಿಯಲ್ಲಿ ಕೋವಿಡ್-19ರಿಂದ ಆಗುತ್ತಿರುವ ಸಾವಿನ ಸಂಖ್ಯೆ ಇಡೀ ಭಾರತದಲ್ಲೇ ಕಡಿಮೆ. ಇದಕ್ಕೆ ಒಂದು ಕಾರಣ ಆಕ್ಸಿ-ಮೀಟರ್ ಗಳ ವ್ಯಾಪಕ ಬಳಕೆ.

ಆಕ್ಸಿಮೀಟರ್ ಎಲ್ಲರಿಗೂ ಕೈಗೆಟುಕುವುದಿಲ್ಲ ಅಥವಾ ಅದನ್ನು ಸರಿಯಾಗಿ ಬಳಸಲು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹೀಗಾಗಿ ರಕ್ತದಲ್ಲಿರುವ ಆಕ್ಸಿಜನ್ ಮಟ್ಟವನ್ನು ತಪಾಸಣೆ ನಡೆಸಲು ಆಮ್ ಆದ್ಮಿ ಪಾರ್ಟಿ ದೇಶದಾದ್ಯಂತ ಆಕ್ಸಿಮಿತ್ರರನ್ನು ನೇಮಿಸುವ ಪ್ರಯತ್ನ ಕೈಗೆತ್ತಿಕೊಂಡಿದೆ. ಈ ಅಭಿಯಾನದಲ್ಲಿ ಭಾಗವಹಿಸಿ ಯುವಕರಿಗೆ ಆಕ್ಸಿಮಿತ್ರರಾಗಲು ಆಪ್ ವಿನಂತಿಸುತ್ತಿದೆ.

ಆಕ್ಸಿಮಿತ್ರರಾಗಲು ಮೊ.ಸಂ. 8884431221ಕ್ಕೆ ಕರೆ ಮಾಡಬಹುದು. ಆಕ್ಸಿಮೀಟರ್ ಬಳಕೆಗೆ ಬೇಕಾದ ತರಬೇತಿ ಮತ್ತು ಸುರಕ್ಷಾ ಸಾಮಗ್ರಿ ಕಾರ್ಯಕರ್ತರಿಗೆ ನೀಡಲಾಗುವುದು. ಆಪ್ ಕಚೇರಿ ವಿಳಾಸ ಹೀಗಿದೆ. #1568, 4ನೇ ಮೇನ್, ಹೆಬ್ಬಾಳು 2ನೆಯ ಹಂತ, ಅಕ್ಷರ ಪಾಠಶಾಲೆ ಬಳಿ, ಮೈಸೂರು Mysore 570017 ಇಲ್ಲಿ ಸಂಪರ್ಕಿಸಬಹುದೆಂದು ಆಪ್ ಕಛೇರಿ ತಿಳಿಸಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: