ಮೈಸೂರು

ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ದಿನಗಳನ್ನು ನೆನಪು ಮಾಡಿಕೊಳ್ಳಲಿ : ಸಿದ್ದರಾಮಯ್ಯ ತಿರುಗೇಟು

ತಾವು ಮುಖ್ಯಮಂತ್ರಿ ಆಗಿದ್ದಾಗ ಎಂಥ ಸರ್ಕಾರ ಇತ್ತು ಎಂಬುದನ್ನು ಎಸ್.ಎಂ.ಕೃಷ್ಣ ಅವರು ಒಮ್ಮೆ ಹಿಂತಿರುಗಿ ನೋಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್.ಎಂ.ಕೃಷ್ಣ ಅವರಿಗೆ ತಿರುಗೇಟು ನೀಡಿದ್ದಾರೆ.
ಕಳೆದ 45 ವರ್ಷಗಳಲ್ಲಿ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ. ಸರ್ಕಾರಕ್ಕೆ ದೂರಾಲೋಚನೆ ಇಲ್ಲ ಎಂಬ ಎಸ್.ಎಂ. ಕೃಷ್ಣ  ಹೇಳಿಕೆಗೆ ಕುರಿತು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಕೃಷ್ಣ  ಅವರು ಹಿರಿಯ ನಾಯಕರು. ಅವರ ದೂರಾಲೋಚನೆ ಕುರಿತು ನನ್ನ ತಕರಾರು ಇಲ್ಲ. ಅವರ ಸರ್ಕಾರ ಇದ್ದಾಗ 30 ಮಂತ್ರಿಗಳು ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್  ಶಾಸಕರ ಸಂಖ್ಯೆ 140ರಿಂದ 60ಕ್ಕೆ ಇಳಿಯಿತು. ಆಗ ಎಂತಹ ದೂರಾಲೋಚನೆಯ ಮತ್ತು ಒಳ್ಳೆಯ ಸರ್ಕಾರ ಇತ್ತು ಎಂಬುದನ್ನು ಕೃಷ್ಣ ಅವರು ನೆನಪು ಮಾಡಿ ಕೊಳ್ಳಲಿ ಎಂದು ತಿಳಿಸಿದರು.

ಈ ಸಂದರ್ಭ ಕಾಂಗ್ರೆಸ್ ನ ಕೆಲವು ಮುಖಂಡರು ಸಿದ್ದರಾಮಯ್ಯ ಜೊತೆಗಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: