ಮೈಸೂರು

ವಿಮಾ ಕ್ಷೇತ್ರ ಸಂಪೂರ್ಣ ಪ್ರಭುತ್ವದ ಒಡೆತನದಲ್ಲಿರಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಸೆ.14:- ಎಲ್ ಐಸಿಯ ಬಂಡವಾಳ ಹಿಂತೆಗೆತದ ಪ್ರಕ್ರಿಯೆ ಭಾರತದ ಅಭಿವೃದ್ಧಿಗೆ ಮಾರಕವಾಗಲಿದೆ. ವಿಮಾ ಕ್ಷೇತ್ರ ಸಂಪೂರ್ಣ ಪ್ರಭುತ್ವದ ಒಡೆತನದಲ್ಲಿರಬೇಕೆಂದು ಒತ್ತಾಯಿಸಿ ಇನ್ಶುರೆನ್ಸ್ ಕಾರ್ಪೋರೇಶನ್ ಪೆನ್ಶನರ್ಸ್ ಅಸೋಶಿಯೇಶನ್ ವತಿಯಿಂದ ಪ್ರತಿಭಟನೆ ನಡೆಯಿತು.
ಅಗ್ರಹಾರದ ಬಳಿ ಸೇರಿದ ಪ್ರತಿಭಟನಾಕಾರರು ಎಲ್ ಐಸಿಯು ಕಳೆದ 64ವರ್ಷಗಳಲ್ಲಿ ದೇಶದ ಮೂಲೆ ಮೂಲೆಗೂ ವಿಮಾ ಸಂದೇಶವನ್ನು ಹರಡುವಲ್ಲಿ ಯಶಸ್ವಿಯಾಗಿದ್ದು, ಸಂಸತ್ದತಿನ ಮತ್ತು ದೇಶದ ಜನರ ನಂಬಿಕೆಯನ್ನು ಸಮರ್ಥಿಸಿಕೊಂಡಿದೆ. ಇಂದು ದೇಶದ ಅತ್ಯಂತ ಗೋಚರ ಮತ್ತು ಅಮೂಲ್ಯವಾದ ಬ್ರಾಂಡ್ ಆಗಿದ್ದು ಲಕ್ಷಾಂತರ ದುರಂತ ಪೀಡಿತರ ಕುಟುಂಬಗಳ ಕಣ್ಣೀರನ್ನು ಒರೆಸಿದೆ. ಕೇಂದ್ರ ಸರ್ಕಾರವು ಘೋಷಿಸುವ ಎಲ್ಲಾ ಯೋಜನೆಗಳಿಗೆ ಎಲ್ ಐಸಿ ಅಪಾರ ಕೊಡುಗೆ ನೀಡುತ್ತಿದೆ. ಇತ್ತೀಚೆಗೆ ರೈಲ್ವೆ ಮೂಲಭೂತ ಸೌಕರ್ಯ ವಿಸ್ತರಣಾ ಯೋಜನೆಗೆ ಎಲ್ ಐಸಿಯು 1.5ಲಕ್ಷ ಕೋಟಿ ನೀಡುತ್ತಿದೆ. ಎಲ್ ಐಸಿ ಹೂಡಿಕೆ ಅತ್ಯಂತ ಸುರಕ್ಷಿತವಾಗಿದ್ದು ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಹೂಡಿಕೆ ಮಾಡುತ್ತಿದೆ. ಲಾಭ ಕೋರತನದ ದುರಾಸೆಯುಳ್ಳ ಖಾಸಗಿ ಬಂಡವಾಳವು ತನ್ನ ಲಾಭಕ್ಕಾಗಿ ಸಾರ್ವಜನಿಕ ವಲಯ ಸಂಸ್ಥೆಗಳ ಷೇರುಗಳನ್ನು ಖರೀದಿಸುತ್ತದೆ ವಿನಃ ಮನುಕುಲದ ಸೇವೆಗಾಗಿ ಅಲ್ಲ. 5ಕೋಟಿ ರೂ.ಬಂಡವಾಳದಿಂದ ಆರಂಭಗೊಂಡ ಎಲ್ ಐಸಿಯು ಇಂದು 31.96ಲಕ್ಷ ಕೋಟಿ ಆಸ್ತಿ ಹೊಂದಿದ್ದು ಐಪಿಒ ಮೂಲಕ ಎಲ್ ಐ ಸಿ ಬಂಡವಾಳಗಳನ್ನು ಸರ್ಕಾರ ಹಿಂತೆಗೆಯಲು ಯಾವುದೇ ಸಕಾರಣಗಳಿಲ್ಲ ಎಂದರು.
ಪ್ರತಿಭಟನೆಯಲ್ಲಿ ಇನ್ಶುರೆನ್ಸ್ ಕಾರ್ಪೋರೇಶನ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸಿ.ಆರ್.ಕೃಷ್ಣಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: