ಮೈಸೂರು

ಜನರು ಸಾಕ್ಷರರಾದರೆ ದೇಶದ ಅಭಿವೃದ್ಧಿಗೆ ಪೂರಕ : ಪರಿಮಳ ಶ್ಯಾಂ

ಮೈಸೂರು,ಸೆ.14:- 54ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ಮಹಾರಾಣಿ ಮಹಿಳಾ ಪ್ರಶಿಕ್ಷಣ ಸಂಸ್ಥೆಯಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಜಿ.ಪಂ ಅಧ್ಯಕ್ಷೆ ಪರಿಮಳ ಶ್ಯಾಂ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ದೇಶದಲ್ಲಿ ಅನಕ್ಷರತೆಯನ್ನು ತೊಲಗಿಸುವ ಉದ್ದೇಶದಿಂದ ಸಾಕ್ಷರತಾ ದಿನ ಆಚರಿಸಲಾಗುತ್ತಿದೆ. ಜನರು ಸಾಕ್ಷರರಾದರೆ ದೇಶದ ಅಭಿವೃದ್ಧಿಗೆ ಪೂರಕ ಎಂದರು. 4 ಗೋಡೆಗಳ ಮಧ್ಯೆ ಕಲಿಯುವ ಶಿಕ್ಷಣ ಮಾತ್ರ ಶಿಕ್ಷಣವಲ್ಲ. ಸಮಾಜದಲ್ಲಿಪ್ರತಿಯೊಂದು ಕ್ಷೇತ್ರದಲ್ಲಿಯೂ ಕಲಿಯುವುದು ಬಹಳ ಇದೆ. ಮುಖ್ಯವಾಹಿನಿಗೆ ಬರದೆ ಇರುವ ಅನಕ್ಷರಸ್ಥ ಬಂಧುಗಳನ್ನು ಸಾಕ್ಷರರನ್ನಾಗಿ ಮಾಡಿ ಅವರಿಗೆ ಸ್ವಾವಲಂಬಿ ಬದುಕನ್ನು ನಡೆಸಲು ಕಲಿಸುವುದು ಶಿಕ್ಷಣ ಎಂದರು.
ವಿದ್ಯಾವಂತರು ಅನಕ್ಷರಸ್ಥರಿಗೆ ಕಲಿಸಲು ಮುಂದಾಗಬೇಕು. ಆಗ ಮಾತ್ರ ಸಂಪೂರ್ಣ ಸಾಕ್ಷರತೆ ಸಾಧಿಸಲು ಸಾದ್ಯವಾಗುತ್ತದೆ. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು. ಸರ್ವರಿಗೂ ಅಕ್ಷರಾಭ್ಯಾಸ ಅಗತ್ಯ. ಜಗತ್ತಿನ ಎಲ್ಲ ಜನರಿಗೂ ಶಿಕ್ಷಣ ಸರ್ವರಿಗೂ ಶಿಕ್ಷಣ ಕಲಿಕೆಗೆ ಅವಕಾಶ ಕಲ್ಪಿಸುವುದು ಸಾಕ್ಷರತದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: