ಮೈಸೂರು

ಮೈಸೂರು ವಿವಿ ಶಿಕ್ಷಣ ಮಂಡಳಿ ಮೊದಲನೇ ಸಾಮಾನ್ಯ ಸಭೆ

ಮೈಸೂರು,ಸೆ.14:- ಮೈಸೂರು ವಿವಿ ಶಿಕ್ಷಣ ಮಂಡಳಿ ಮೊದಲನೇ ಸಾಮಾನ್ಯ ಸಭೆ ಇಂದು ಮೈಸೂರು ವಿವಿ ವಿಜ್ಞಾನ ಭವದಲ್ಲಿ ನಡೆದಿದೆ.
ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್, ಶಾಸಕ ಎಲ್ ನಾಗೇಂದ್ರ, ಶಿಕ್ಷಣ ಮಂಡಳಿ ಸದಸ್ಯರು ಹಾಗೂ ಹಿರಿಯ ಶಿಕ್ಷಣ ತಜ್ಞರು ಸಭೆಯಲ್ಲಿ ಭಾಗಿಯಾಗಿದ್ದಾರೆ. ವಿಶ್ವವಿದ್ಯಾಲಯ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಲಿದ್ದು, ಮುಂದಿನ ಯೋಜನೆಗಳ ಕುರಿತು ಅಭಿಪ್ರಾಯ ಮಂಡನೆಯಾಗಲಿದೆ. ವೃತ್ತಿಪರ, ಕೌಶಲ್ಯ ಅಭಿವೃದ್ಧಿ ಕುರಿತಾದ ಶಿಕ್ಷಣ ನೀಡುವ ಕುರಿತು ಚರ್ಚೆ ನಡೆಯಲಿದ್ದು, ಶಿಕ್ಷಣ ಅಭಿವೃದ್ಧಿ ಕುರಿತು ಹಲವು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: