ಕ್ರೀಡೆದೇಶಮನರಂಜನೆ

ತಾಯ್ತನದ ಅನುಭವ ಹಂಚಿಕೊಂಡ ನಟಿ ಅನುಷ್ಕಾ ಶರ್ಮಾ: `ನನ್ನ ಇಡೀ ಜಗತ್ತು ಒಂದೇ ಫ್ರೇಮ್‌ನಲ್ಲಿ’ ಎಂದ ಕೊಹ್ಲಿ

ಮುಂಬೈ,ಸೆ.14-ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಾಯಿಯಾಗುತ್ತಿರುವ ಸಂತಸದಲ್ಲಿದ್ದಾರೆ. ಆ ಸಂತಸದ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ಫೋಟೋವೊಂದನ್ನು ಹಂಚಿಕೊಂಡಿರುವ ಅನುಷ್ಕಾ ತಾಯ್ತನದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಅನುಷ್ಕಾ ಶರ್ಮಾ, ತನ್ನ ಹೊಟ್ಟೆಯನ್ನು ನೋಡುತ್ತ ‘ನಿಮ್ಮಲ್ಲಿಯೇ ಒಂದು ಜೀವ ಸೃಷ್ಟಿಯಾಗುತ್ತಿರುವುದನ್ನು ಅನುಭವಿಸುವುದಕ್ಕಿಂತ ಬೇರೆ ನೈಜತೆ ಮತ್ತು ವಿನಮ್ರತೆ ಇಲ್ಲ. ಇದು ನಿಮ್ಮ ನಿಯಂತ್ರಣದಲ್ಲಿ ಇಲ್ಲವೆಂದರೆ ಏನು?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ವಿರಾಟ್ ಕೊಹ್ಲಿ `ನನ್ನ ಇಡೀ ಜಗತ್ತು ಒಂದೇ ಫ್ರೇಮ್‌ನಲ್ಲಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವಿರುಷ್ಕಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಖುಷಿಯ ಸುದ್ದಿಯನ್ನು ಕಳೆದ ತಿಂಗಳು ಹಂಚಿಕೊಂಡಿದ್ದರು. ಇಬ್ಬರು ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿ, ನಾವು ಮೂರು ಮಂದಿಯಾಗುತ್ತಿದ್ದೇವೆ. ಮುಂದಿನ ವರ್ಷ ಜನವರಿಯಲ್ಲಿ ಹೊಸ ಸದಸ್ಯರ ಆಗಮನವಾಗುತ್ತಿದೆ ಎಂದು ಬರೆದುಕೊಂಡಿದ್ದರು.

2017 ಡಿಸೆಂಬರ್ 11ರಂದು ಇಟಲಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿವಾಹವಾಗಿ ಸರಿ ಸುಮಾರು ಮೂರು ವರ್ಷಗಳ ನಂತರ ವಿರುಷ್ಕಾ ದಂಪತಿ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಸದ್ಯ ವಿರಾಟ್‌ ಕೊಹ್ಲಿ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ ಆಡಲು ಯುಎಇಯಲ್ಲಿದ್ದಾರೆ. ಸೆ.19 ರಿಂದ ಐಪಿಎಲ್‌ ಆರಂಭವಾಗಲಿದೆ.

ಅನುಷ್ಕಾ ಶರ್ಮಾ ‘ಜೀರೋ’ ಸಿನಿಮಾ ಬಳಿಕ ನಟನೆಯಿಂದ ಸ್ವಲ್ಪ ದೂರ ಉಳಿದಿದ್ದು, ನಿರ್ಮಾಪಕಿಯಾಗಿದ್ದಾರೆ. ಪಾತಾಳ್ ಲೋಕ್, ಬುಲ್ ಬುಲ್ ಸಿನಿಮಾಕ್ಕೆ ಅನುಷ್ಕಾ ಹಣ ಹೂಡಿದ್ದರು. (ಎಂ.ಎನ್)

Leave a Reply

comments

Related Articles

error: