ಮೈಸೂರು

ವಿವಿಧ ಬೇಡಿಕೆಗಳನ್ನು ಸರಕಾರವು ಈಡೇರಿಸದ ಹಿನ್ನೆಲೆ : ಸರ್ಕಾರಿ ವೈದ್ಯರ ಅಸಹಕಾರ ಪ್ರತಿಭಟನೆ

ಮೈಸೂರು,ಸೆ.15:- ವಿವಿಧ ಬೇಡಿಕೆಗಳನ್ನು ಸರಕಾರವು ಈಡೇರಿಸದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದಿನಿಂದ ಸರ್ಕಾರಿ ವೈದ್ಯರು ಅಸಹಕಾರ ಪ್ರತಿಭಟನೆ ನಡೆಸಲಿದ್ದು, ಆಸ್ಪತ್ರೆಯ ಒಳಗಡೆಯೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರು. ಇಲಾಖೆಗೆ ಆಪ್ಲೈನ್, ಆನ್ಲೈನ್ ಮಾಹಿತಿ ನೀಡದೆ ಮುಷ್ಕರ ಮಾಡಲು ನಿರ್ಧರಿಸಿದ್ದು, ವೈದ್ಯರ ವೇತನ ಹೆಚ್ಚಳ, 3 ವರ್ಷ ಸೇವೆ ಸಲ್ಲಿಸಿದ ವೈದ್ಯರನ್ನು ಖಾಯಂಗೊಳಿಸಬೇಕು. ಕೇರಳ ಮಾದರಿ 8 ಗಂಟೆ ಕರ್ತವ್ಯ ಸಮಯ ನಿಗದಿಮಾಡಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮೂಲಕ ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರಿಕೆಗೆ ಸೆ.21ರವರೆಗೂ ಗಡುವು ನೀಡಿದ್ದು, ಈ ಅವಧಿಯಲ್ಲಿ ಕೋವಿಡ್ ವರದಿಯನ್ನು ನೀಡದಿರಲು ನಿರ್ಧರಿಸಿದ್ದಾರೆ. 21ರವರೆಗೂ ಸರ್ಕಾರ ಬೇಡಿರಿಕೆ ಈಡೇರಿಸದಿದ್ದಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: