Uncategorized

ಮರ ಉಳಿಸಿಕೊಂಡೇ ಅಭಿವೃದ್ಧಿ ಮಾಡುವಂತೆ ಭಾನು ಮೋಹನ್ ಒತ್ತಾಯ

ಮೈಸೂರು,ಸೆ.15:- ಮೈಸೂರಿನ ಮಂಡಿಮೊಹಲ್ಲಾದ ಆಯುರ್ವೇದಿಕ್ ಆಸ್ಪತ್ರೆ ಬಳಿ 2ಬಾಗೇಮರ( ಛತ್ರಿ ಮರ)ವಿದ್ದು ಇದು ಫುಟ್ ಪಾತ್ ನಲ್ಲಿದೆ. ಇದರ ಪಕ್ಕದಲ್ಲಿ ಇರ್ವಿನ್ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಮಳೆ ನೀರು ಚರಂಡಿಯನ್ನು ನಿರ್ಮಿಸಲು ಮರ ಹನನ ಮಾಡಲು ಹೊರಟಿದ್ದಾರೆ. ಮರಗಳನ್ನು ಕಡಿಯಬಾರದು ಎಂದು ಪರಿಸರ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾದ ಭಾನು ಮೋಹನ್ ಒತ್ತಾಯಿಸಿದರು.
ಈ ಕುರಿತು ಮಾತನಾಡಿರುವ ಅವರು ನಗರದಲ್ಲಿ ಯಾವುದೇ ಚರಂಡಿಯಲ್ಲಿಯೂ ನೀರು ಹೋಗುವುದಿಲ್ಲ. ಮಳೆ ಬಂದರೆ ರಸ್ತೆಯಲ್ಲಿಯೇ ಹೋಗುವುದು. ಈ ಮರದಲ್ಲಿ ತಲತಲಾಂತರದಿಂದ ಗಿಳಿಗಳು ವಲಸೆ ಬಂದು ಇರುವುದು, ವಾಸಿಸುವುದು ಮಾಡುತ್ತಿವೆ. ಗಿಳಿಗಳ ಸಂತತಿ ನಾಶ ಮಾಡುವುದು ಬೇಡ. ಈ ಮರಗಳನ್ನು ಉಳಿಸಿಕೊಂಡೇ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: