ದೇಶ

ವೇತನ ಬಾಕಿ ಹೈ ಕೋರ್ಟ್ ಮೊರೆಹೋದ ದೆಹಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು

ನವದೆಹಲಿ,ಸೆ.15-ಮೇ ತಿಂಗಳಿನಿಂದ ಬಾಕಿ ಉಳಿದುಕೊಂಡಿರುವ ವೇತನಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ಎಂಟು ಪ್ರಾಧ್ಯಾಪಕರು ಹೈ ಕೋರ್ಟ್ ಮೊರೆ ಹೋಗಿದ್ದಾರೆ.

2020ರ ಮೇ ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ತಮ್ಮ ವೇತನ ಪಾವತಿಸುವಂತೆ ಕಾಲೇಜುಗಳಿಗೆ ಸೂಚನೆ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ವಕೀಲರಾದ ಅಶೋಕ್‌ ಅಗರ್‌ವಾಲ್‌, ಕುಮಾರ್‌ ಉತ್ಕರ್ಷ್‌ ಅವರ ಮೂಲಕ ಸಹಾಯಕ ಪ್ರಧ್ಯಾಪಕ ಉದಯ್‌ಬಿರ್‌ ಸಿಂಗ್‌ ಮತ್ತು ಇತರರು ಮೇಲ್ಮನವಿ ಸಲ್ಲಿಸಿದ್ದಾರೆ.

ಅರ್ಜಿದಾರರಿಗೆ 2020ರ ಮೇ ತಿಂಗಳಿನಿಂದ ಇಲ್ಲಿಯವರೆಗೂ ವೇತನ ಪಾವತಿಯಾಗಿಲ್ಲ. ಕಾಲೇಜುಗಳ ಕಡೆಯಿಂದ ಉಂಟಾಗಿರುವ ಈ ನಿಷ್ಕ್ರಿಯತೆಯ ವಿರುದ್ಧ, ಅರ್ಜಿದಾರರಿಗೆ ವೇತನ ನೀಡುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ. ಕಾಲೇಜುಗಳು ದೆಹಲಿ ವಿಶ್ವವಿದ್ಯಾಲಯ ಕಾಯ್ದೆ 1922ರ ನಿಬಂಧನೆಗಳು, ಸಂವಿಧಾನಸ ಸೆಕ್ಷನ್‌ 14 ಮತ್ತು 21ರ ಅಡಿಯಲ್ಲಿ ಖಾತರಿಪಡಿಸಿರುವ ಅರ್ಜಿದಾರರ ಮೂಲಭೂತ ಹಕ್ಕನ್ನು ಉಲ್ಲಂಘಿಸಿವೆ ಎಂದು ತಿಳಿಸಲಾಗಿದೆ.

ವೇತನ ತಡೆ ಹಿಡಿದಿರುವುದು ಅನ್ಯಾಯ, ತಾರತಮ್ಯ ಮತ್ತು ಅಸಾಂವಿಧಾನಿಕ ಎಂದೂ ದೂರಲಾಗಿದ್ದು ಮುಂದಿನ ದಿನಗಳಲ್ಲಿ ಸಕಾಲದಲ್ಲಿ ವೇತನ ಪಾವತಿಸುವಂತೆ ಸೂಚಿಸಬೇಕು ಎಂದು ಕೋರಲಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: