ದೇಶಪ್ರಮುಖ ಸುದ್ದಿ

ಎಂಥದ್ದೇ ಪರಿಸ್ಥಿತಿ ಎದುರಿಸಲು ಸೇನೆ ಸರ್ವ ಸನ್ನದ್ಧ: ಸಚಿವ ರಾಜನಾಥ್ ಸಿಂಗ್ 

ನವದೆಹಲಿ,ಸೆ.15-ಚೀನಾದ ಎಲ್ಲಾ ಹುನ್ನಾರಗಳನ್ನು ಸೋಲಿಸಲು ನಮ್ಮ ರಕ್ಷಣಾ ಪಡೆಗಳು ಸರ್ವ ಸನ್ನದ್ಧವಾಗಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಲಡಾಖ್ ಗಡಿ ಉದ್ವಿಗ್ನತೆ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಅವರು, ಭಾರತದ ಸಾರ್ವಭೌಮತೆ ಮೇಲೆ ದಾಳಿ ಮಾಡಲು ಯಾರಿಗೂ ಬಿಡುವುದಿಲ್ಲ. ಭಾರತದ ಒಂದಿಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲಡಾಖ್ ಗಡಿ ಸಮಸ್ಯೆ ಉದ್ಭವಕ್ಕೆ ಚೀನಿ ಸೇನೆಯ ಆಕ್ರಮಣ ನೀತಿಯೇ ಕಾರಣ ಎಂದು ಪುನರುಚ್ಛಿಸಿದ ರಾಜನಾಥ್ ಸಿಂಗ್, ಗಡಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂಬ ತನ್ನ ನಿಲುವುನಿಂದ ಭಾರತ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಲಡಾಖ್ ಗಡಿ ಘರ್ಷಣೆಯ ಆರಂಭ, ಕಾರಣ ಹಾಗೂ ಇದುವರೆಗೂ ಕೈಗೊಂಡಿರುವ ಕ್ರಮಗಳ ಕುರಿತು ರಾಜನಾಥ್ ಸಿಂಗ್ ಲೋಕಸಭೆಗೆ ಸಂಪೂರ್ಣ ಮಾಹಿತಿ ನೀಡಿದರು.

ಗಡಿ ವಿವಾದ ಕುರಿತು ಚೀನಾದ ನಿಲುವು ಸದ್ಯದ ಲಡಾಖ್ ಸಮಸ್ಯೆಗೆ ಮೂಲ ಕಾರಣ. ಲಡಾಖ್ ಗಡಿ ವಿವಾದ ಇತ್ಯರ್ಥಕ್ಕೆ ರಾಜತಾಂತ್ರಿಕ ಶಾಂತಿ ಮಾತುಗಳೇ ಪರಿಹಾರ ಒದಗಿಸಬಲ್ಲದು ಎಂಬುದು ನಮ್ಮ ನಿಲುವು. ಗಡಿಯಿಂದ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಗೆ ಚೀನಾ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮೊದಲು ಗಡಿ ಉದ್ವಿಗ್ನತೆ ಕಡಿಮೆ ಮಾಡಿ ಬಳಿಕ ಗಡಿ ವಿವಾದದ ಕುರಿತು ಮಾತನಾಡುವುದು ಸೂಕ್ತ ಎಂಬುದು ನಮ್ಮ ಸರ್ಕಾರದ ನಿಲುವು ಎಂದು ಹೇಳಿದರು.

ಈ ವೇಳೆ ಮಾತೃಭೂಮಿ ರಕ್ಷಣೆಗಾಗಿ ಪ್ರಾಣತೆತ್ತ ವೀರ ಭಾರತೀಯ ಯೋಧರಿಗೆ ರಾಜನಾಥ್ ಸಿಂಗ್ ಶ್ರದ್ಧಾಂಜಲಿ ಸಲ್ಲಿಸಿದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: