ಕರ್ನಾಟಕಪ್ರಮುಖ ಸುದ್ದಿಮನರಂಜನೆ

ವಿಚಾರಣೆಗೆ ಆಗಮಿಸಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ: ನಟಿ ಐಂದ್ರಿತಾ ಟ್ವೀಟ್

ಬೆಂಗಳೂರು,ಸೆ.15-ಸ್ಯಾಂಡ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್, ನಟಿ ಐಂದ್ರಿತಾ ರೇ ಅವರಿಗೆ ಸಿಸಿಬಿ ನೋಟಿಸ್ ನೀಡಿದೆ. ಈ ಬಗ್ಗೆ ಐಂದ್ರಿತಾ ಪ್ರತಿಕ್ರಿಯಿಸಿದ್ದಾರೆ.

ಸಿಸಿಬಿ ಜಾರಿ ಮಾಡಿರುವ ನೋಟಿಸ್​ ಅನ್ನು ವಾಟ್ಸ್‌ ಆ್ಯಪ್ ಮೂಲಕ ಸ್ವೀಕರಿಸಿದ್ದೇವೆ. ನಾಳೆ(ಬುಧವಾರ) ಬೆಳಿಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ನಾವಿಬ್ಬರೂ ಆಗಮಿಸಲಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ಟ್ವೀಟ್​ ಮಾಡಿದ್ದಾರೆ.

ಸದ್ಯ ದಿಗಂತ್, ಐಂದ್ರಿತಾ ಬೆಂಗಳೂರಿನಲ್ಲಿ ಇಲ್ಲ. ಆದರೆ ನಾಳೆ ವಿಚಾರಣೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರಕರಣದಲ್ಲಿ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಇದೆಲ್ಲದ್ದಕ್ಕೂ ಐಂದ್ರಿತಾ ಅವರು ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ. (ಎಂ.ಎನ್)

 

 

Leave a Reply

comments

Related Articles

error: